ಕಲಬುರ್ಗಿ ನಗರದ ಸಂತ್ರಾಸವಾಡಿಯ ಹಿದಾಯತ್ ಸೆಂಟರ್ ನಲ್ಲಿ ಅಕ್ಟೋಬರ್ ಒಂದರಂದು ಬೋಧನಾ ಪ್ರಭುದ್ಧತೆ, ಪ್ರತಿಭಾ ಪೋಷಣೆ ಹಾಗೂ ಸಾಮಾಜಿಕ ಪರಿವರ್ತನೆ ಯ ಶೀರ್ಷಿಕೆ ಅಡಿಯಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಜರಗಿತು
ಇದರಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಷ್ಟ್ರ ಅಧ್ಯಕ್ಷರಾದ ಅಬ್ದುಲ್ ರಹೀಮ್ ಶೇಖ್ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು
ಕಾರ್ಯಕ್ರಮವು ಅಲ್ತಾಫ್ ಅಮ್ಜದ್ ಇವರ ಕುರಾನ್ ಪ್ರಾರ್ಥನೆ ಯಿಂದ ಪ್ರಾರಂಭವಾಯಿತು
ಸ್ವಾಗತವನ್ನು ಕಲೀಮ್ ಆಬಿದ್ ಜಿಲ್ಲಾಧ್ಯಕ್ಷರು ಐಟಿ ಕಲಬುರ್ಗಿ ಇವರು ಮಾಡಿದರು
ಮೊಹಮ್ಮದ್ ರಜಾ ಮಾನವಿ ರಾಜ್ಯ ಅಧ್ಯಕ್ಷರು ಐಟಾ ಕರ್ನಾಟಕ ಇವರು ತಮ್ಮ ಪ್ರಾಸ್ತಾವಿಕ ಭಾಷಣ ಮಾಡುತ್ತಾ ಕೆಲವೊಂದು ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರದ ಕೇಂದ್ರಗಳಾಗಿ ಪರಿವರ್ತಿಸುವಂತೆ ಮಾಡುತ್ತಿದ್ದಾರೆ ಈ ವ್ಯವಸ್ಥೆಯನ್ನು ತಡೆಗಟ್ಟಲು ಹಾಗೂ ವಿದ್ಯಾರ್ಥಿಗಳಲ್ಲಿ ಮೌಲ್ಯ ಆಧಾರಿತ ಶಿಕ್ಷಣ ತರಲು ಶಿಕ್ಷಕರ ಜವಾಬ್ದಾರಿ ತುಂಬಾ ದೊಡ್ಡದು ಈ ನಿಟ್ಟಿನಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಸಿ ಒಳ್ಳೆಯ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿ ಬೇಕೆಂದು ಹೇಳುವುದು ಇದು ಎಲ್ಲಾ ಜನರ ಕರ್ತವ್ಯವು ಹೌದು ಎಂಬುದನ್ನು ಹೇಳುತ್ತಾ ಈ ಸಮ್ಮೇಳನದಲ್ಲಿ ಅಭಿಯಾನದ ಮಹತ್ವವನ್ನು ಸಹ ತಿಳಿಸುತ್ತಾ ತಮ್ಮ ಮಾತನ್ನು ಮುಗಿಸಿದರು
ಮುಖ್ಯ
ಅತಿಥಿಗಳಾಗಿ ಆಗಮಿಸಿದ ಸೈಯದ್ ತನ್ವೀರ್ ಅಹ್ಮದ್ ಶಿಕ್ಷಣ ಸಮಿತಿ. ಜೆ ಐ ಹೆಚ್ ನವದೆಹಲಿ, ಇವರು ಮಾತನಾಡುತ್ತಾ ಆಧುನಿಕ ಯುಗದಲ್ಲಿ ನಾವು ಪ್ರತಿಯೊಂದು ವಸ್ತುಗಳನ್ನು ಆಧುನಿಕರಣ ಗೊಳಿಸುತ್ತಿದ್ದೇವೆ, ಉದಾಹರಣೆಗೆ ನಾವು ಉಪಯೋಗಿಸುತ್ತಿದ್ದ ಮೊಬೈಲ್ ಗಳು ಸಹ ಈಗ ಸ್ಮಾರ್ಟ್ ಫೋನ್ ಗಳಾಗಿ ಬದಲಾವಣೆಯಾಗಿದೆ ಇದೇ ರೀತಿಯಾಗಿ ಪ್ರತಿಯೊಬ್ಬ ಶಿಕ್ಷಕರು ತಮ್ಮಲ್ಲಿ ಬದಲಾವಣೆಯನ್ನು ತರುತ್ತ ತಮ್ಮ ವಿಷಯಗಳಲ್ಲಿ ಆಧುನಿಕತೆಯನ್ನು ತರುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಣ ಜ್ಞಾನವನ್ನು ಕೊಡಬೇಕು ಎಂಬ ಕಿವಿ ಮಾತನ್ನು ಹೇಳಿದರು.
ಮತ್ತೋರ್ವ ಅತಿಥಿಗಳಾದಂತ ಡಾ. ವಿಕ್ರಂ ವಿಸಾಜಿ. ಪ್ರಸಾರಾಂಗ ನಿರ್ದೇಶಕರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ ಇವರು ತಮ್ಮ ಭಾಷಣದಲ್ಲಿ ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಕಾರ್ಯಗಳನ್ನು ಶ್ಲಾಘಿಸಿದರು, ಮತ್ತು ಇಂತಹ ಕಾರ್ಯಕ್ರಮಗಳು ಈಗಿನ ವ್ಯವಸ್ಥೆಯಲ್ಲಿ ನಡೆಯುವುದು ಬಹಳ ಮುಖ್ಯ ಎಂದು ಹೇಳುತ್ತಾ ಕಾರ್ಯಕ್ರಮ ಆ ಯೋಜನೆ ಮಾಡಿದ ಶಿಕ್ಷಕ ಬಂಧುಗಳಿಗೆ ಶುಭಾಶಯಗಳು ಕೋರಿದರು.
ಈ ಕಾರ್ಯಕ್ರಮದಲ್ಲಿ ಶಾಹಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಸಾಹೇಬರಿಗೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜದಲ್ಲಿ ಮಾಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಐಟಾ ಕರ್ನಾಟಕ ವತಿಯಿಂದ ಪ್ರತಿಷ್ಠಿತ ಮೌಲಾನಾ ಅಫಝಲ್ ಹುಸೇನ್ ಶಿಕ್ಷಣ ಸೇವಾ ರತ್ನ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಗೌರವ ಸ್ವೀಕರಿಸಿ ಡಾ. ಅಬ್ದುಲ್ ಖದೀರ್ ಸಾಹೇಬರು ಮಾತನಾಡುತ್ತಾ. ನಾನು ಮೊದಲು ಒಂದು ಪುಸ್ತಕವನ್ನು ಓದಿ ಈ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಯೋಚನೆ ಮಾಡಿದೆ ಆ ಪುಸ್ತಕದ ಹೆಸರು ಫನ್ ಎ ತಾಲಿಮ್ ಓ ತರಬಿಯತ್. ಈ ಪುಸ್ತಕವನ್ನು ಎಲ್ಲ ಶಿಕ್ಷಕರು ತಮ್ಮಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಮಾತನ್ನು ಹೇಳುತ್ತಾ ಹಿಂದುಳಿದ ಮತ್ತು ಅಂಚಿನಲ್ಲಿರುವ ವಿದ್ಯಾರ್ಥಿಗಳಿಗಾಗಿ ತಾವು ಸ್ಥಾಪಿಸಿರುವ ಎ ಐ ಸಿ ಯು ಸೆಂಟ್ರಲ್ ಗಳ ಬಗ್ಗೆ ತಿಳಿಸಿದರು ಹಾಗೂ ಈ ಒಂದು ಗೌರವ ಸನ್ಮಾನ ನನಗೆ ನಿಜವಾಗಿಯೂ ಸಂತೋಷ ತಂದಿದೆ ಎಂಬ ಮಾತನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರಹೀಮ್ ಶೇಖ್ ರಾಷ್ಟ್ರ ಅಧ್ಯಕ್ಷರು ಐಟಾ. ವಹಿಸಿ ಮಾತನಾಡಿ ನನಗೆ ಈ ಒಂದು ರಾಜ್ಯ ಸಮ್ಮೇಳನ ನಿಜವಾಗಿಯೂ ತುಂಬಾ ಸಂತೋಷ ತಂದಿದೆ ಏಕೆಂದರೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಶಿಕ್ಷಕ ಶಿಕ್ಷಕಿಯರು ಬಂದಿದ್ದಾರೆ ಅವರ ಈ ಸ್ಪೂರ್ತಿ ನಮ್ಮ ಈ ಶಿಕ್ಷಣ ಕ್ಷೇತ್ರಕ್ಕೆ ಸ್ಪೂರ್ತಿ ಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
ಕಾರ್ಯಕ್ರಮ ನಿರೂಪಣೆ ಮೆಹಬೂಬ್ ಅಲಿ ಬೆಂಗಳೂರು. ಇವರು ನೆರವೇರಿಸಿದರು.
ಅಭಿಯಾನದ ಸಂಚಾಲಕರಾದ ಖಾಲಿದ್ ಪರ್ವಾಝ್ ರವರು ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.