ನಾಗಮಂಗಲದಲ್ಲಿ ಮತದಾರ ಮಿಂಚಿನ ನೋಂದಣಿ ಅಭಿಯಾನ
ನಾಗಮಂಗಲ. ನ:- 9 ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ದಿನದ ಅಂಗವಾಗಿ ನೊಂದಣಿ ಅಭಿನಯದ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಾಗಮಂಗಲ ಪಟ್ಟಣದ
ಪ್ರಮುಖ ರಸ್ತೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತ ಜಾಥಾವು ಆರಂಭಗೊಂಡಿತು.
ಮತದಾರ ಮಿಂಚಿನ ಸಂಚಾರದ ಅಭಿಯಾನವು ಮೆರವಣಿಗೆ ನಂತರ ಪಟ್ಟಣದ ಮಂಡ್ಯ ರಸ್ತೆಯ ಬಳಿ ಅಭಿಯಾನವು ಮಾನವ ಸರಪಳಿಯ ವೃತ್ತಾಕಾರವಾಗಿ ಸೇರಿದ್ದು ಮತದಾರ ಪಟ್ಟಿಯ ಪರಿಷ್ಕರಣೆಯ ಬಗ್ಗೆ ತಾಲೂಕು ದಂಡಾಧಿಕಾರಿಗಳಾದ ನಂದೀಶ್ ರವರು ಮತದಾರ ಜಾಗೃತಿಯ ಬಗ್ಗೆ ಮಾತನಾಡಿದರು
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭಗೊಂಡಿದ್ದು, ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಸೇರಿದಂತೆ ಹೆಸರು ಇನ್ನಿತರ ವಿವರದ ತಿದ್ದುಪಡಿ, ವರ್ಗಾವಣೆಗೆ ಸಂಬಂಧಿಸಿದ ಸೇವೆಗಳನ್ನು ಮತದಾರರು ಪಡೆದುಕೊಳ್ಳಬಹುದು. 18 ವರ್ಷ ತುಂಬಿದ ಯುವಜನತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಇತರರಿಗೂ ಅರಿವು ಮೂಡಿಸಬೇಕು ಎಂದರು.
ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಜಾಥಾದಲ್ಲಿ ಭಾಗವಹಿಸಿದ್ದರು