ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇದ ವಿಧೆಯಕ;
ಕಾನೂನು ಸಚಿವರಿಗೆ ಅಭಿನಂದನೆ- ರವೀಂದ್ರ ನಾಯ್ಕ.
ಶಿರಸಿ: ಬೆಳಗಾಂವ ಚಳಿಗಾಲದ ಅಧಿವೇಶನದಲ್ಲಿ ಇಂದು ರಾಜ್ಯ ಸರಕಾರವು ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇದ ವಿಧೆಯಕವನ್ನ, ಅನುಮೋಧನೆಗೊಳಿಸರುವುದಕ್ಕೆ ಉತ್ತರ ಕರ್ನಾಟಕ ವಕೀಲರುಗಳು ಸರಕಾರದ ಪರವಾಗಿ ಕಾನೂನು ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಸುವರ್ಣ ಸೌಧದ ಸಚಿವರ ಕಾರ್ಯಾಲಯದಲ್ಲಿ, ವಕೀಲರ ಪರ ಕಾನೂನು ಜ್ಯಾರಿಗೊಳಿಸಿರುವುದಕ್ಕೆ, ಉತ್ತರ ಕರ್ನಾಟಕದ ವಿವಿಧ ತಾಲೂಕುಗಳಿಂದ ಆಗಮಿಸಿದ ವಕೀಲರುಗಳು ಸಚಿವರಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.
ಕಾಯ್ದೆಯಲ್ಲಿ ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪರಹಿತವಾಗಿರುವ ವಕೀಲರುಗಳು ಕಾರ್ಯ ಜರುಗಿಸಿದಲ್ಲಿ, ಹಾಗೂ ವಕೀಲರು ಪ್ರಕಾರ್ಯಗಳ ನಿರ್ವಹಣೆ ಪರಿಣಾಮವಾಗಿ ವಕೀಲರ ಭದ್ರತೆಗೆ ಬೆದರಿಕೆ ನಿಯಂತ್ರಿಸುವಲ್ಲಿ ಹಾಗೂ ವಕೀಲರಿಗೆ ಸಂಪೂರ್ಣ ಸಂರಕ್ಷಣೆ ನೀಡುವ ಉದ್ಧೇಶ ಕಾನೂನಿನ ಮೂಲ ಅಂಶವಾಗಿದೆ ಎಂದು ಚರ್ಚೆಯಲ್ಲಿ ಪ್ರಸ್ತಾಪವಾಯಿತು.
ಮೂರು ವರ್ಷ ಜೈಲು ಶಿಕ್ಷೆ:
ನ್ಯಾಯವಾದಿಗಳಿಗೆ ಸಂಬAಧಿಸಿದ ಅಪರಾಧಗಳಿಗಾಗಿ ಮಾಡಿದ ಕೃತ್ಯಕ್ಕೆ ಆರು ತಿಂಗಳುಗಳಿAದ ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಅವಧಿಯ ಖಾರವಾಸದಿಂದ ಅಥವಾ ಒಂದು ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ಕಾನೂನಿನಲ್ಲಿ ಒಳಪಡಿಸಲಾಗಿದೆ ಎಂದು ಸ್ಫಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.