*ತೀರ್ಥಹಳ್ಳಿ ಕಾರ್ಮಿಕ ಇಲಾಖೆ ಕರ್ಮಕಾಂಡದ ವಿರುದ್ಧ ಸಿಡಿದೆದ್ದ ಕಾರ್ಮಿಕರು..!*
*ಗೃಹ ಸಚಿವರ ಸ್ವಕ್ಷೇತ್ರ ತೀರ್ಥಹಳ್ಳಿ ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿಗಳ ಡೀಲ್ ಡೀಲ್…!*
*ಕಾರ್ಮಿಕರ ಬೆವರಹನಿಯ ಹಣ ಪೀಕುತ್ತಿರುವ ರಾಘವೇಂದ್ರ, ಮಮ್ತಾಜ್ ಬೇಗಂ ಅವರನ್ನು ವರ್ಗಾವಣೆ ಮಾಡಿ..!*
*ಕಾರ್ಮಿಕರು ಸರ್ಕಾರದ ಯೋಜನೆ ಪಡೆಯುವುದಕ್ಕೆ ಬಿಜೆಪಿಯವರಿಂದ ಫೋನ್ ಮಾಡಿಸಬೇಕಂತೆ..!?*
*ಕಾರ್ಮಿಕ ಇಲಾಖೆ ಅಧಿಕಾರಿಗಳ ಎತ್ತುವಳಿಯಿಂದ ಸರ್ಕಾರಕ್ಕೆ ಕಳಂಕ .*
ತೀರ್ಥಹಳ್ಳಿ:-ತಾಲ್ಲೂಕಿನ ಕಾರ್ಮಿಕ ಇಲಾಖೆಯ ಕರ್ಮಕಾಂಡದ ಬಗ್ಗೆ ಕಾರ್ಮಿಕರು ಹೋರಾಟ ನಡೆಸುವುದು ಇಂದು ನಿನ್ನೆಯದಲ್ಲ ಕಾರ್ಮಿಕರು ದುಡಿದು ಸಂಪಾದಿಸಿದ ಕಷ್ಟದ ಬೆವರಹನಿ ಸಂಪಾದನೆ ಹಣ ಈ ಎತ್ತುವಳಿ ಅಧಿಕಾರಿಗಳಿಗೆ ಕೊಟ್ಟರಷ್ಟೇ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ದೊರಕುತ್ತದೆ.
ಇಲ್ಲವಾದರೆ ಯಾವ ಸೌಲಭ್ಯಗಳೂ ಇಲ್ಲ ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎಂಬ ವ್ಯಕ್ತಿಯ ಮೇಲೆ ಹಲವಾರು ಬಾರಿ ಈ ರೀತಿ ಹಣ ಪಡೆಯುತ್ತಿರುವ ಬಗ್ಗೆ ಕಾರ್ಮಿಕರು ಆರೋಪಿಸಿದರು ಈವರೆಗೂ ಈತನೇ ಈ ಕಾರ್ಮಿಕ ಇಲಾಖೆಯಲ್ಲಿ ಏಕ ಅಧಿಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಲ್ಲಿ ಎಲ್ಲವೂ ಮುಕ್ತವಾಗಿ ಡೀಲ್ ನಡೆಯುತ್ತದೆ ಇವರಿಗೆ ಹೇಳೋರು ಕೇಳೋರು
ಸರ್ಕಾರದ ಕಾನೂನು ಕಾಯಿದೆ ಮೇಲಾಧಿಕಾರಿಗಳ ಭಯ ಭೀತಿ ಇದಾವುದೂ ಇಲ್ಲದಂತಾಗಿದೆ.
ಕಾರ್ಮಿಕ ಇಲಾಖೆ ಉಪ ಅಧೀಕ್ಷಕರ ಹುದ್ದೆ ಇಲ್ಲದೆ ಕಳೆದ 3ವರ್ಷಗಳಿಂದ ಕಾರ್ಮಿಕರ ಯಾವುದೇ ಸೌಲಭ್ಯಗಳು ಸರಿಯಾಗಿ ಫಲಾನುಭವಿಗಳಿಗೆ ಸಿಗುತ್ತಿಲ್ಲ,
ಇಲ್ಲಿ ಪ್ರಭಾರ ಕಾರ್ಮಿಕ ಅಧಿಕಾರಿಯಾಗಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮುಮ್ತಾಜ್ ಬೇಗಂ ಎಂಬುವ ಅಧಿಕಾರಿ ವಾರಕ್ಕೊಮ್ಮೆ ಭದ್ರಾವತಿಯಿಂದ ಬಂದು ಹೊಗುತ್ತಿದ್ದಾರೆ ಈ ಅಧಿಕಾರಿಯ ವಿರುದ್ಧವೂ ಸಾಕಷ್ಟು ಹಣ ಕೇಳುತ್ತಾರೆ ಎಂಬ ಆರೋಪವನ್ನು ಕಾರ್ಮಿಕರು ಮಾಡುತ್ತಿದ್ದಾರೆ.
ಇನ್ನೂ ಕಾರ್ಮಿಕರ ಹೋರಾಟಕ್ಕೆ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಮುಖಂಡರು, ಸಾಮಾಜಿಕ ಹೋರಾಟಗಾರರಾದ ಕೆಳಕೆರೆ ಪೂರ್ಣೇಶ್,ಅಶ್ವಲ ಗೌಡ,ಜಯಕರ ಶೆಟ್ಟಿ,ಯಡೂರು ಪ್ರೇಮ್,ಭರತ್ ಹೂಗಾರ್,
ಮುಖಂಡರಾದ ಕೆಳಕೆರೆ ದಿವಾಕರ್,ಅಮ್ರಪಾಲಿ ಸುರೇಶ್ ಕುಡುಮಲ್ಲಿಗೆ ರಮೇಶಶೆಟ್ಟಿ,ಅನೇಕ ಮುಖಂಡರುಗಳು ಕಾರ್ಮಿಕರ ಹೋರಾಟಕ್ಕೆ ಬೆಂಬಲವಾಗಿ ನಿಂತು ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಯೋಜನೆಗಳು ಎಲ್ಲ ಫಲಾನುಭವಿಗಳಿಗೂ ಶೀಘ್ರಗತಿಯಲ್ಲಿ ಸಿಗಬೇಕು ಮತ್ತು ಕಾರ್ಮಿಕರಿಗೆ ಕಂಟಕವಾಗಿರುವ ರಾಘವೇಂದ್ರ ಮತ್ತು ಮಮ್ತಾಜ್ ಬೇಗಂ ಅವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.