ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ನೂತನ ಅಧ್ಯಕ್ಷರಾದ ಶ್ರೀ ಆರ್.ವಿ.ದೇಶಪಾಂಡೆ ಅವರಿಂದ ಹೊಸ ವರ್ಷದ ಶುಭಾಶಯಗಳು
ಕಾರವಾರ -ಹೊಸ ವರ್ಷವೂ ನಾಡಿನ ಸರ್ವ ಜನತೆಗೂ ನೆಮ್ಮದಿ ತರುವ ಹರುಷದ ವರುಷವಾಗಲೆಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ನೂತನ ಅಧ್ಯಕ್ಷರು ಹಾಗೂ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆಯವರು ಶುಭ ಪ್ರಾರ್ಥಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಸಂಕಷ್ಟಗಳು ದೂರವಾಗಿ, ಸರ್ವರಿಗೂ ಸಕಲ ಸನ್ಮಂಗಲವನ್ನು ದಯಾಪಾಲಿಸುವುದರ ಜೊತೆಗೆ ಶಾಂತಿ, ಸೌಹಾರ್ದತೆಯ ಸದೃಢ ಸಮಾಜ ನಿರ್ಮಾಣವಾಗಲೆಂದು ಆರ್.ವಿ.ದೇಶಪಾಂಡೆಯವರು ಶುಭ ಹಾರೈಸಿದ್ದಾರೆ.