ಸಿರಿಧಾನ್ಯ ಮೇಳದಲ್ಲಿ ಮಾವಳ್ಳಿ ರೈತ ಉತ್ಪಾದಕ ಕಂಪನಿಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಬೆಂಗಳೂರು : ಜಲಾನಯನ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಾವಳ್ಳಿ ರೈತ ಉತ್ಪಾದಕ ಕಂಪನಿಯು
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ ೫ ರಿಂದ ೭ ನೇ ತಾರೀಖಿನವರೆಗೆ ನಡೆದ ಸಿರಿಧಾನ್ಯಮೇಳದಲ್ಲಿ ಭಾಗವಹಿಸಿ ತನ್ನ ಕಂಪನಿಯಿಂದ ಮುದ್ದೆ ಬೆಲ್ಲ, ಜೇನುತುಪ್ಪ, ಕರಾವಳಿಯಲ್ಲಿ ಬೆಳೆದ ಕುಚ್ಚಲಕ್ಕಿ, ಹಾಗೂ ಭತ್ತದ ತೋರಣಗಳು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡಿತು. ಈ ಸಂದರ್ಭದಲ್ಲಿ ಕರ್ನಾಟಕ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಜಲಾನಯನ ಇಲಾಖೆಯ ಹಿರಿಯ ಅಧಿಕಾರಿ ತಿಮ್ಮಯ್ಯ, ಶ್ರೀನಿವಾಸ್, ಕೆಪ್ಯಾಕ್ ನ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲಾಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಸಂತಸ ವ್ಯಕ್ತ ಪಡಿಸಿದರಲ್ಲದೇ ಪ್ರಸ್ತುತ ಮೇಳದಲ್ಲಿ ಪಾಲ್ಗೊಂಡು ನಿಮ್ಮ ಭಾಗಕ್ಕೆ ಬೇಕಾಗುವ ರಾಜ್ಯದ ಬೇರೆ ಬೇರೆ ಕಡೆಯಲ್ಲಿ ಸಿಗುವ ಉತ್ಪನ್ನಗಳನ್ನು ತರಿಸಿಕೊಂಡು ಮತ್ತು ನಿಮ್ಮ ಭಾಗದಲ್ಲಿನ ವಿಶೇಷ ಉತ್ಪನ್ನಗಳನ್ನು ಅಗತ್ಯವಿರುವ ಕಡೆಗೆ ಸರಬರಾಜು ಮಾಡುವ ಅವಕಾಶಗಳನ್ನು ಬಳಸಿಕೊಂಡು ಮೂಲಕ ಕಂಪನಿಯ ವ್ಯಾಪಾರ ಅಭಿವೃದ್ಧಿ ಹೆಚ್ಚಿಸಿಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವಳ್ಳಿ ರೈತ ಉತ್ಪಾದಕ ಕಂಪನಿ ಆರ್ಥಿಕ ಪ್ರಗತಿ ಸಾಧಿಸುವಂತೆ ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಸ್ಕೊಡವೆಸ್ ಸಂಸ್ಥೆಯ ರೈತ ಉತ್ಪಾದಕ ಕಂಪನಿಯ ಯೋಜನಾಧಿಕಾರಿ ಪ್ರಶಾಂತ ನಾಯಕ, ಉತ್ತರಕನ್ನಡ ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ, ಕ್ಷೇತ್ರ ಅಧಿಕಾರಿ ಉಮೇಶ್ ಮರಾಠಿ, ವಿನಾಯಕ ಹೆಗಡೆ, ಮಾವಳ್ಳಿ ರೈತ ಉತ್ಪಾದಕ ಕಂಪನಿಯ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಗಣೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.