ಕರ್ನಾಟಕ ರಣಧೀರರ ವೇದಿಕೆಗೆ ನೂತನ ಪದಾಧಿಕಾರಿಗಳ ಸೇರ್ಪಡೆ ಹಾಗೂ 2024ರ ಸಂಘಟನೆಯ ಕ್ಯಾಲೆಂಡರ್ ಬಿಡುಗಡೆ
ಕರ್ನಾಟಕ ರಣಧೀರರ ವೇದಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಇಂದು ನೂತನ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಹಾಗೂ 2024ರ ಸಂಘಟನೆಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಿಂದ ನೆರವೇರಿಸಲಾಯಿತು.
ಇಂದು ನಡೆದ ನೂತನ ಪದಾಧಿಕಾರಿಗಳ ಸೇರ್ಪಡೆ ಹಾಗೂ 2024ರ ಸಂಘಟನೆಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಡು-ನುಡಿ, ನೆಲ-ಜಲ, ಗಡಿ-ಭಾಷೆಯ ವಿಚಾರದಲ್ಲಿ ನಮ್ಮ ಸಂಘಟನೆಯ ಸಕ್ರಿಯವಾಗಿ ಹೋರಾಟಗಳನ್ನು ಮಾಡುತ್ತಿದ್ದು ಸಂತೋಷಕರವಾದ ವಿಚಾರವಾಗಿರುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಮಂಡು ಸರ್ಕಾರಗಳು ಇಲ್ಲಸಲ್ಲದ ಕೇಸುಗಳನ್ನಾಗಿ ಕನ್ನಡಪರ ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಈ ಕೂಡಲೇ ಇಂತಹ ನೀಚ ಕೃತ್ಯಗಳನ್ನು ಕೈ ಬಿಡದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಬೃಹತ್ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ, ಏನು ಈಗ ನೂತನವಾಗಿ ಸೇರ್ಪಡೆಗೊಂಡಿರುವಂತಹ ಎಲ್ಲಾ ಕಾರ್ಯಕರ್ತರು ನಾಡು ನುಡಿ ವಿಚಾರಕ್ಕೆ ಕಾನೂನು ಬದ್ಧವಾಗಿ ಹೋರಾಟ ಮಾಡುವಲ್ಲಿ ಸೈನಿಕರಂತೆ ಸಿದ್ಧವಾಗಬೇಕು ಅಂಬೇಡ್ಕರ್ರವರು ನೀಡಿದಂತಹ ಸಂವಿಧಾನವನ್ನು ಅರ್ಥಗರ್ಭಿತವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸ್ವತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಕನ್ನಡದ ಕಲೆ ಇಮ್ಮಡಿ ಪುಲಿಕೇಶಿಯಂತೆ ನಾಡಿನಲ್ಲಿ ಒಬ್ಬೊಬ್ಬರು ಒಬ್ಬೊಬ್ಬ ಸೇನಾನಿಯಂತೆ ಆಗಬೇಕು ಕರ್ನಾಟಕ ರಣಧೀರರ ವೇದಿಕೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಬಿ.ಎನ್. ವಿಜಯಕುಮಾರ್, ಸಂಘಟನೆ ರಾಜ್ಯ ನ್ಯಾಯ ಸಮಿತಿ ಘಟಕದ ಗೌರವಾಧ್ಯಕ್ಷರಾದ ಹೆಚ್.ಜಿ.ರಾಮಾಂಜನೇಯ, ರಾಜ್ಯ ಸಂಚಾಲಕರಾದ ರಾಕೇಶ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಲಾಘಟಕದ ಉಮೇಶ್ , ನೆಲಮಂಗಲ ತಾಲೂಕು ಸಂಚಾಲಕರಾದ ರಮೇಶ್, ನೆಲಮಂಗಲ ತಾಲ್ಲೂಕು ಪದಾಧಿಕಾರಿಗಳಾದ ನವೀನ್, ಅಮಾನ್, ಗುಂಟೆಪಾಳ್ಯ ಗ್ರಾಮ ಶಾಖೆಯ ಪದಾಧಿಕಾರಿಗಳು, ಶ್ಯಾಮ ಭಟ್ಟರಪಾಳ್ಯ ಗ್ರಾಮ ಶಾಖೆಯ ಪದಾಧಿಕಾರಿಗಳು, ಮಧುರೆ ಹೋಬಳಿ ಅಧ್ಯಕ್ಷರಾದ ಮುನಿರಾಜ್ ರವರು ಹಾಗೂ ಇನ್ನಿತರರು ಹಾಜರಿದ್ದರು.