ಏಮ್ಸ್ ಫಾರ್ ಬಾಗಲಕೋಟೆ ಅಭಿಯಾನಕ್ಕೆ ಚಾಲನೆ
ಗುಳೇದಗುಡ್ಡ:ಗುಳೇದಗುಡ್ಡ- ಪಟ್ಟಣದ ಬಂಡಾರಿ ಕಾಲೇಜಿನಲ್ಲಿ ಏಮ್ಸ್ ಫಾರ್ ಬಾಗಲಕೋಟೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಕಾಲೇಜನ್ನು ಬಾಗ ಲಕೋಟೆಯಲ್ಲಿ ಸ್ಥಾಪಿಸಬೇಕೆಂ ದು ಒತ್ತಾಯಿಸುವ ಮೂಲಕ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ಗುಳೇದಗುಡ್ಡ ಪಟ್ಟಣದಲ್ಲಿ ಏಮ್ಸ್ ಫಾರ್ ಬಾಗಲಕೋಟೆ, ಅಭಿಯಾನ ಆರಂಭಿಸಿದರು.
ಗುಳೇದಗುಡ್ಡ ಪಟ್ಟಣದ ಬಂಡಾರಿ ಹಾಗೂ ರತಿ ಕಾಲೇ ಜಿನಲ್ಲಿ ಏಮ್ಸ್ ಫಾರ್ ಬಾಗಲ ಕೋಟೆ ಅಭಿಯಾನ ಕಾರ್ಯ ಕ್ರಮದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ, ಭುವನೇಶ್ ಪೂಜಾ ಅವರು ಮಾತನಾಡಿ, ಗೇಮ್ಸ್ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ.
ಬಾಗಲಕೋಟೆ ಕರ್ನಾ ಟಕದ ಮಧ್ಯಭಾಗವಾಗಿದೆ ಹಾಗಾಗಿ ಏಮ್ಸ್ ಮೆಡಿಕಲ್ ಕಾಲೇ ಜು ಬಾಗಲಕೋಟೆಯಲ್ಲಿ ಸ್ಥಾಪನೆ ಆಗುವುದರಿಂದ ಈ ಭಾಗದ ಬಡ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
ಕಡಿಮೆ ಖರ್ಚಿನಲ್ಲಿ ಅತ್ಯಾ ಧುನಿಕ ಸೌಲಭ್ಯವುಳ್ಳ ಮೆಡಿಕಲ್ ಕಾಲೇಜು ಸ್ಥಾಪನೆ ಆಗುವುದ ರಿಂದ ಉದ್ಯೋಗಾವಕಾಶಗಳು ಕೂಡ ಹೆಚ್ಚಾಗಲಿವೆ ಅದಕ್ಕಾಗಿ ಈಗ ಏನು ಆರಂಭಿಸಲಾಗಿದೆ.ಈ ಅಭಿಯಾನ ಕಾರ್ಯಕ್ರಮದಲ್ಲಿ ರಾಜು ರೆಡ್ಡಿ,ಮುತ್ತು ಚಿಕ್ಕನಾರ್ಗುಂದ್ ಆನ೦ದ್, ಕೊಲ್ಲಾಪುರ, ಮಣಿಕಂಠ, ಪ್ರಭು ಕಳ್ಳಿಗುಡ್ಡ, ಕೃಷ್ಣ ಬೆಡಗಿ,ಸಾಗರ್ ತೋಳಮಟ್ಟಿ ಮಿಥುನ್ ಜಾದವ್ ಹಾಗೂ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಶರಣಪ್ಪ.ಹೆಚ್.,ಬಾಗಲಕೋಟೆ