ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸಾಗರದ ಶಾಸಕರಾದ *ಶ್ರೀ ಗೋಪಾಲಕೃಷ್ಣಬೇಳೂರು* ಆಯ್ಕೆ
ಸಾಗರ-ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸಾಗರದ ಶಾಸಕರಾದ *ಶ್ರೀ ಗೋಪಾಲಕೃಷ್ಣಬೇಳೂರು*ಅವರನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆದೇಶ ಹೊರಡಿಸಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲಕೃಷ್ಣ ಅವರು ಬಿಜೆಪಿ ಮಾಜಿ ಸಚಿವ ಎಚ್. ಹಾಲಪ್ಪ ಅವರನ್ನು ಸೋಲಿಸಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಸಾಗರ ಶಾಸಕ ಪ್ರಬಲ ಈಡಿಗ ಸಮುದಾಯ ಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಈ ಹುದ್ದೆ ಒಲಿದು ಬಂದಿದೆ.