ಅರಣ್ಯವಾಸಿಗಳಿಗೆ ಅರಣ್ಯ ಸಚಿವರಿಂದ ಶ್ರೀರಕ್ಷೆ ;
ಮೂರು ಎಕರೆಗಿಂತ ಕಡಿಮೆ ಇರುವವರನ್ನು ಒಕ್ಕಲೆಬ್ಬಿಸುವುದಿಲ್ಲ.
ಶಿರಸಿ: ಅರಣ್ಯವಾಸಿಗಳು ಅರಣ್ಯ ಒತ್ತುವರಿ ಮಾಡಿರುವ ಕುಟುಂಬಕ್ಕೆ ಸಂಬAಧಿಸಿದ, ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಕಂಡ್ರೆ ಅವರು ತಿಳಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ, ಇಂದು ದಿ. ೧೫ ರಂದು, ಬೆಂಗಳೂರಿನಲ್ಲಿನ ವಿಕಾಸ ಸೌಧದ ಕಚೇರಿಯಲ್ಲಿ ಹೋರಾಟಗಾರರ ವೇದಿಕೆ ನಿಯೋಗವು ಭೇಟ್ಟಿಕೊಟ್ಟಂತ ಸಂದರ್ಭದಲ್ಲಿ ಮೇಲಿನಂತೆ ಅವರು ಹೇಳಿದರು.
ಪ್ರತಿ ಕುಟುಂಬಕ್ಕೂ, ಕುಟುಂಬ ನಿರ್ವಹಣೆಗೆ ಅರಣ್ಯ ಸಾಗುವಳಿ ಮತ್ತು ಪಟ್ಟಾ ಜಮೀನು ಸೇರಿ ಮೂರು ಎಕರೆ ಅವಶ್ಯವೆಂದು ಸರಕಾರ ಮನಗೊಂಡಿರುವ ಹಿನ್ನೆಲೆಯಲ್ಲಿ ಮೇಲಿನಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ, ಅರ್ಜಿ ವಿಲೇವಾರಿ ಆಗುವವರೆಗೂ ಅರಣ್ಯವಾಸಿಗಳಿಗೆ ಬದ್ಧತೆ ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಜಿ ಎಮ್ ಶೆಟ್ಟಿ ಅಚಿವೆ ಮತ್ತು ರಾಮ ಮೊಗೇರ್ ಅಳ್ವೆಕೋಡಿ ನಿಯೋಗದಲ್ಲಿದ್ದು, ಚರ್ಚೆಯಲ್ಲಿ ಭಾಗವಹಿಸಿದ್ದರು.
೧೯೭೮ ರ ಪೂರ್ವ ಅತಿಕ್ರಮಣ:
ಜುಲೈ ೧೯೭೮ ರ ಪೂರ್ವದಲ್ಲಿ ಅತಿಕ್ರಮಿಸಿರುವ ೧೪,೮೪೮.೮೩ ಹೇಕ್ಟರ್ ಪ್ರದೇಶದ, ೧೯,೩೪೮ ಒತ್ತುವರಿ ಕುಟುಂಬಗಳಿಗೆ ಅರಣ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕೇಂದ್ರ ಸರಕಾರ ಪರವಾನಿಗೆ ನೀಡಿದೆ. ಅರಣ್ಯವಾಸಿಗಳ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ನಿಯೋಗಕ್ಕೆ ತಿಳಿಸಿದರು.