15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಮೆಸ್ಕಾಂ ಇಂಜಿನಿಯರ್ ಮಂಜುನಾಥ್
ಮೂಡಿಗೇರಿ: 15 ಸಾವಿರ ಲಂಚ ಪಡೆಯುವಾಗ ಮೂಡಿಗೆರೆಯ ದಾರದಹಳ್ಳಿ ಮೆಸ್ಕಾಂ ಕಿರಿಯ ಇಂಜಿನಿಯರ್ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಶಾಖೆಯ ಮೆಸ್ಕಾಂನ ಕಿರಿಯ ಅಭಿಯಂತರ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಂಡುಗುಳಿ ಗ್ರಾಮದ ಮೊಹಮ್ಮದ್ ಆಲಿ ಎಂಬುವವರ ಜಮೀನಿನ ನೀರಾವರಿ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ನೀಡಲು 15,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಇನ್ಸೆಕ್ಟರ್ ಅನಿಲ್ ರಾಥೋಡ್, ಅನಿಲ್ ನಾಯಕ್ ಸಿಬ್ಬಂದಿಗಳಾದ ಪ್ರಸಾದ್, ಸವಿನಯ್ ವಿಜಯಭಾಸ್ಕರ್ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.