ಎಲ್ಲಾ ದಾನಕ್ಕಿನ್ನ ವಿದ್ಯಾ ದಾನವೇ ಮೇಲು
ನೆಲಮಂಗಲ -ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಲಮಂಗಲದಲ್ಲಿ ದಿನಾಂಕ 16/02/2024 ರಂದು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಹಾಗೂ HDFC ಕ್ರೆಡಿಲ ಸಂಸ್ಥೆಯ ಸಹಯೋಗದೊಂದಿಗೆ ಪೂರ್ಣಗೊಂಡ ಕಾಮಗಾರಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಈ ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಕೋನದಿಂದ ಕಾಂಪೌಂಡ್ ಗೋಡೆ ರಿಪೇರಿ ಹಾಗೂ ಡಬಲ್ ಚೈನ್ ಲಿಂಕ್ ಬೇಲಿಯನ್ನು ಹಾಕಿಸಿ ಕೊಡಲಾಗಿತ್ತು, ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಹೈಟೆಕ್ ಶೌಚಾಲಯವನ್ನು ಕಲ್ಪಿಸಿ ಅವುಗಳ ಕೀಲಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು,
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಾನಿಗಳಾದ ಶ್ರೀ ರಾಜನಂದಿನಿ ಪ್ರತಿಯೊಂದು ಆಸ್ತಿಯನ್ನು ಜೋಪಾನವಾಗಿರಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಉಳಿಸಿಕೊಂಡು ಹೋಗುವಂತೆ ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀ ರಾಜನಂದಿನಿ, ಡೆಪ್ಯುಟಿ ಮ್ಯಾನೇಜರ್ ಸಿಎಸ್ಆರ್ ಪ್ರಾಜೆಕ್ಟ್ ಎಂಬುವವರು ಮುಂಬೈನಿಂದ ಬಂದಿದ್ದು, ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಶ್ರೀಮತಿ ಅಂಬಿಕಾ, ಶ್ರೀ ಉದಯ್ ಕುಮಾರ್ ರವರು ಮತ್ತು ಶ್ರೀ ತಿಮ್ಮಯ್ಯ ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ನೆಲಮಂಗಲ, ಸುಚಿತ್ರರವರು ECO, ಎಚ್.ಕೆ.ನಾಗೇಶ್ ರವರು ಮುಖ್ಯ ಶಿಕ್ಷಕರು, ಶ್ರೀ ಶಿವಕುಮಾರ್ ಸಿದ್ದರಾಮೇಗೌಡರು ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು