ಈಶ್ವರಪ್ಪ ಮನೆಗೆ ಸಂಧಾನಕ್ಕೆ ಹೋದ ಬಿಜೆಪಿ ಕೇಂದ್ರ ನಾಯಕರಿಗೆ ತೀವ್ರ ನಿರಾಸೆ, ರೆಬಲ್ ಸ್ಟಾರ್ ಆಗಿ ಸ್ಪರ್ಧೆ ಖಚಿತ ಎಂದು ಬದಲಾದ ಖಟ್ಟರ್ ಹಿಂದುತ್ವ ಪ್ರತಿಪಾದಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಬಿಜೆಪಿಯ ಹಿರಿಯ ನಾಯಕ ಖಟ್ಟರ್ ಹಿಂದುತ್ವ ಪ್ರತಿಪಾದಿ ಕೆ.ಎಸ್. ಈಶ್ವರಪ್ಪನವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ಸಿಗದಕ್ಕೆ ಸಿಟ್ಟಾಗಿದ್ದು ಬಿಜೆಪಿಯಿಂದ ಬಂಡಾಯವೆದ್ದು ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ತಂಡಕ್ಕೆ ಭಾರೀ ನಿರಾಸೆ ಆಗಿದೆ.ಇಂದುಬೆಳಿಗ್ಗೆ ಕೆಎಸ್ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಭೇಟಿ ನೀಡಿ ಚರ್ಚಿಸಲು ಮುಂದಾಗಿದ್ದರು ಆದರೆ ಕೆಎಸ್ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದು ವರಿಷ್ಠರನ್ನ ಮನೆಯಲ್ಲಿ ಕೂರಿಸಿ ಹೊರಗೆ ಹೋಗಿದ್ದ ಕೆಎಸ್ ಈಶ್ವರಪ್ಪ ಅರ್ಧ ಗಂಟೆ ಕಳೆದರೂ, ಮನೆಯೊಳಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್.ಈಶ್ವರಪ್ಪ ಮನೆಯಿಂದ ತೆರಳಿದರು. ಈ ಮೂಲಕ ಸಂಧಾನ ಸಭೆ ವಿಫಲವಾಗಿದೆ.
ಪುತ್ರ ಕಾಂತೇಶ್ ಅವರಿಗೆ ಹಾವೇರಿ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಈಶ್ವರಪ್ಪನವರಿಗೆ ಭ್ರಮನಿರಸನವಾಗಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕ, ಆಪ್ತಮಿತ್ರ ಬಿ.ಎಸ್. ಯಡಿಯೂರಪ್ಪನವರ ಮೇಲೆ ತಿರುಗಿ ಬಿದ್ದಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಜಯಲಕ್ಷ್ಮೀ ನಿವಾಸಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ತಂಡ ಭೇಟಿ ನೀಡಿತ್ತು. ಈ ವೇಳೆ ಮನೆಯಲ್ಲಿ ಕೆ.ಎಸ್ ಈಶ್ವರಪ್ಪರ ಜೊತೆ ಸತತ ಮುಕ್ಕಾಲು ಗಂಟೆ ಚರ್ಚೆ ಮಾಡಿದ ತಂಡ ಯಾವುದೇ ಫಲಿತಾಂಶವನ್ನು ಕಾಣಲಿಲ್ಲ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ರಂಗು ದಿನೇ ದಿನೇ ಬದಲಾಗ್ತಾ ಇದ್ದು ಶಿವಮೊಗ್ಗದಿಂದ ಸ್ವತಂತ್ರ್ಯವಾಗಿ ಚುನಾವಣೆ ಎದುರಿಸೋ ಘೋಷಣೆ ಮಾಡಿರೋ ಈಶ್ವರಪ್ಪನವರು ಶಿವಮೊಗ್ಗದಲ್ಲಿ ಹೊಸ ಚರಿತ್ರೆ ಬರೆಯೋ ಸಂಕಲ್ಪ ತೊಟ್ಟಿದ್ದಾರೆ.ಯಾವುದೇ ಮನವೊಲಿಕೆಗೆ ಬಗ್ಗಲ್ಲ, ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತಾ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಸದ್ಯ ಈಶ್ವರಪ್ಪನವರ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಆನಂದ್ ಗುರೂಜಿ ಅವರು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಠಿಗೆ ಕುಳಿತುಕೊಂಡ ಸಮಯದಲ್ಲಿ ಈಶ್ವರಪ್ಪ ಅವರಿಗೆ ಮೊಬೈಲ್ ಗೆ ಕರೆ ಬಂದಿದೆ ಸ್ವೀಕರಿಸಿದ ಈಶ್ವರಪ್ಪ ಅವರಿಗೆ ನಾಳೆ ಮೋದಿ ಅವರು ನಿಮ್ಮ ನಿವಾಸಕ್ಕೆ ಭೇಟಿ ನೀಡುತ್ತಾರಾ ಎಂದು ಕೇಳಿದ್ದಾರೆ. ಇದಕ್ಕೆ, ಯಾರು ಹೇಳಿದ್ದು ಎಂದು ಈಶ್ವರಪ್ಪ ಪ್ರಶ್ನಿಸುತ್ತಾರೆ. ಟಿವಿಯಲ್ಲಿ ಬರುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಈಶ್ವರಪ್ಪ, ಇಲ್ಲ ಬರುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆ ವ್ಯಕ್ತಿ, ಒಂದು ವೇಳೆ ಮೋದಿ ನಿಮ್ಮ ನಿವಾಸಕ್ಕೆ ಬಂದರೆ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹೇಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಮೋದಿ ನಮ್ಮ ಮನೆಗೆ ಬರುವುದಿಲ್ಲ, ಗ್ಯಾರಂಟಿ ಎಂದು ಹೇಳಿದ ಈಶ್ವರಪ್ಪ ಫೋನ್ ಕಾಲ್ ಕಟ್ ಮಾಡಿದ್ದಾರೆ.
ನನ್ನ ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದೆ. ರಾಜ್ಯಾಧ್ಯಕ್ಷರು ಲಿಂಗಾಯತರೇ ಬೇಕು ಅಂದಿದ್ದರೆ ಯತ್ನಾಳ್ ಅವರನ್ನು ಮಾಡಬೇಕಿತ್ತು. ಯತ್ನಾಳ್ ಅವರನ್ನ ಯಾಕೆ ಮಾಡಲಿಲ್ಲ? ಲಿಂಗಾಯತರು ಬೆಳೆಯುವುದು ಇವರಿಗೆ ಇಷ್ಟವಿಲ್ಲ ಓಕೆ. ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಈ ನಡುವೆ ಈಶ್ವರಪ್ಪನವರ ಬಂಡಾಯ ಶಮನ ಮಾಡಲು ಹಲವಾರು ಹಿರಿಯ ನಾಯಕರು ಪ್ರಯತ್ನಪಡುತಿದ್ದು ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ .ಇನ್ನೇನ್ನು ಈಶ್ವರಪ್ಪನವರು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರವರು ಗೆಲುವಿನ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ .ತಮ್ಮ ಮಕ್ಕಳನ್ನು ಮಾತ್ರ ರಾಜಕೀಯ ವಾಗಿ ಬೆಳೆಸುವ ಯೆಡಿಯೂರಪ್ಪನವರಿಗೆ ಇತರರ ಮಕ್ಕಳು ಬೆಳೆಯುವ ಬಗ್ಗೆ ಅಶಕ್ತಿ ಇಲ್ಲವೆಂಬುದು
ಈಸ್ವಪರಪ್ಪನವರ ಮಾತು ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಇದ್ದಂತೆ ಪರಿಸ್ಥಿತಿ ಉಂಟಾಗುವ ಮೊದಲು ವರಿಷ್ಠರು ಉರಿಯುವ ಬೆಂಕಿಗೆ ತುಪ್ಪ ಸುರಿಯದಂತೆ ಸಂಧಾನ ಮಾಡಿದರೆ ಮುಂದೆ ಎಲ್ಲ ಕ್ಷೇತ್ರದಲ್ಲಿ ಬಂಡಾಯ ಶಮನವಾಗುವುದನ್ನು ತಡೆಯಬಹುದಾಗಿದೆ.