30 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಮಹಿಳಾ ತಹಶೀಲ್ದಾರ್ ಗೀತಾ
ಚಿಕ್ಕನಾಯಕನಹಳ್ಳಿ – ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಹಶೀಲ್ದಾರ ಗೀತಾ ಲೋಕಾಯುಕ್ತ ಬಲೆಗೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಗೆ ಸೇರಿದ 33 ಗುಂಟೆ ಜಮೀನನನ್ನು ಭೂ ಪರಿವರ್ತನೆ ಮಾಡಿ ಖಾತೆ ಪಹಣಿ ಮಾಡಿಕೊಡಲು 3 ಲಕ್ಷ ಲಂಚಕ್ಕೆ ರೈತನ ಬಳಿ ಬೇಡಿಕೆಯಿಟ್ಟಿದ್ದ ತಹಶಿಲ್ದಾರ್ ಗೀತಾ.
ಇವತ್ತು ಬೆಳಗ್ಗೆ 20 ಸಾವಿರ ಹಣ ಪಡೆದಿದ್ದ ತಹಶಿಲ್ದಾರ್ ಗೀತಾ.ಮಿಕ್ಕಿದ ಹಣದಲ್ಲಿ ಇಂದು ಸಂಜೆ 30 ಸಾವಿರ ಹಣ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಲಾಕ್. ರೈತ ಮಲ್ಲಿಕಾರ್ಜುನ ಅವರನ್ನಾ ತಹಶಿಲ್ದಾರ್ ಗೀತಾ ತಮ್ಮ ಮನೆಗೆ ಕರೆಸಿಕೊಂಡು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ತಹಶಿಲ್ದಾರ್.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ವೇಳೆ ಗೀತಾ ಬಲೆಗೆಸದ್ಯ ಚಿಕ್ಕನಾಯಕನಹಳ್ಳಿ ತಹಶಿಲ್ದಾರ್ ಗೀತಾ ಅವರನ್ನಾ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು.ಅಧಿಕಾರಿಗಳಿಂದ ಮುಂದುವರಿದ ತನಿಖೆ ಇನ್ನೆಷ್ಟು ಭ್ರಷ್ಟಾಚಾರ ಬಟಾಬಯಲು ಆಗುತ್ತದೆಯೋ ಕಾದು ನೋಡಬೇಕು.