ಮಟ್ಕಾ ದಂಧೆ ನಡೆಸಲು ಅನುಮತಿ ನೀಡಲು 1 ಲಕ್ಷ ರೂ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಲೋಕಾಯುಕ್ತ ಬಲೆಗೆ ಬಿದ್ದ ಎ.ಎಸ್.ಐ
ಶಿವಮೊಗ್ಗ-ಮಟ್ಕಾ ದಂಧೆ ನಡೆಸಲು ಹಣ ಪಡೆಯುವಾಗ ಲೋಕಾದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರ್ ಎಂ ಎಲ್ ನಗರದಲ್ಲಿರುವ ಅವರ ಮನೆಯ ಬಳಿಯೇ ರಫಿಕ್ ಎಂಬುವರಿಂದ 1 ಲಕ್ಷ ರೂ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಎಎಸ್ ಐ ರೆಹಮಾನ್ ಬಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ ಪಿ ವಾಸುದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಟ್ಕಾ ದಂಧೆ ನಡೆಸುವವರಿಂದ ರೂ.1,20,000 ಹಣಕ್ಕೆ ರೆಹಮಾನ್ ಬೇಡಿಕೆ ಇಟ್ಟಿದ್ದು ಇಂದು ಒಂದು ಲಕ್ಷ ರೂ ಹಣಪಡೆಯುವ ವೇಳೆ ದಾಳಿ ನಡೆದಿದೆ.
ನಗರದಲ್ಲಿ ನೇಯುತ್ತಿರುವ ಅಕ್ರಮ ದಂಧೆಗಳಾದ ಓಸಿ, ಮಟ್ಕಾ ದಂಧೆಗಳಲ್ಲಿ ಪೊಲೀಸರ ಶಾಮೀಲು ಆರೋಪ ಕೇಳಿ ಬರುತ್ತಿತ್ತು. ಆದರೆ ಈ ದಾಳಿಯಿಂದ ಆರೋಪಗಳು ಸತ್ಯ ಎಂದು ತಿಳಿದು ಬರುತ್ತಿದೆ.