ಖಾತಾ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು
ಮೈಸೂರು- ಖಾತಾ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸರ್ಕಾರಿ ಕಚೇರಿಯ ಲಂಚಬಾಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಿಡಿಓ,ಸರ್ವೆಯರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಸರಗೂರು ತಾಲೂಕು ತಳಲು ಗ್ರಾಮ ಪಂಚಾಯ್ತಿಯ ಪಿಡಿಓ ಶಿಲ್ಪ,ಭೂಮಾಪಕ ಬಾಲಾಜಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಶಿವಲಿಂಗ ಪ್ರಸಾದ್ ಲೋಕಯುಕ್ತ ದಾಳಿಗೆ ಒಳಗಾದವರಾಗಿದ್ದಾರೆ.
ಸರಗೂರು ತಾಲೂಕಿನ ಚೆನ್ನಾಗುಂಡಿ ಗ್ರಾಮದ ಲಿಂಗರಾಜು ಎಂಬುವರಿಗೆ ಇ ಖಾತಾ ಮಾಡಿಕೊಡಲು ಶಿಲ್ಪಾ 8000 ಬಾಲಾಜಿ, 2000 ರೂ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಿಲ್ಪ ಹಣ ಪಡೆದು ಡಾಟಾ ಎಂಟ್ರಿ ಆಪರೇಟರ್ ಗೆ
ಕೊಟ್ಟಿದ್ದಾರೆ.ಲೋಕಾಯುಕ್ತ ಎಸ್ಪಿ ಸಜಿತ್ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ಕೃಷ್ಣಯ್ಯ. ವಿ ಹಾಗೂ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರೂಪಶ್ರೀ, ಜಯರತ್ನ, ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ವೀರಭದ್ರ ಸ್ವಾಮಿ, ಆಶಾ, ತ್ರಿವೇಣಿ, ಕಾಂತರಾಜ್,, ಮೋಹನ್ ಗೌಡ, ಶೇಖರ್, ಲೋಕೇಶ್, ದಿನೇಶ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.