ಅಖಿಲ ಕರ್ನಾಟಕ ಗಾಯಕರ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) , ಸಂಘದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯಾಗಿ ಶಿಕ್ಷಕಿ, ಗಾಯಕಿ, ನಿರೂಪಕಿ ಡಾ.ವಿದ್ಯಾ. ಕೆ ಆಯ್ಕೆ
ಚಿಕ್ಕಮಗಳೂರು- ಅಖಿಲ ಕರ್ನಾಟಕ ಗಾಯಕರ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) , ಸಂಘದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯಾಗಿ ಶಿಕ್ಷಕಿ, ಗಾಯಕಿ ಡಾ.ವಿದ್ಯಾ. ಕೆ ಅವರು ಆಯ್ಕೆಯಾಗಿದ್ದಾರೆ. ಸಂಘಟ ನೆಯ ರಾಜ್ಯ ಅಧ್ಯಕ್ಷ ರು ಮತ್ತು ರಾಜ್ಯ ಪದಾಧಿಕಾರಿಗಳು ಚಿಕ್ಕಮಗಳೂರು ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕಿ ಡಾ.ವಿದ್ಯಾ ಕೆ ಅವರನ್ನು ಸನ್ಮಾನ ಮಾಡಿ ,ಆದೇಶ ಪತ್ರ ನೀಡಿದರು.
ಅಖಿಲ ಕರ್ನಾಟಕ ಗಾಯಕರ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಗಾಯಕರ ಬಳಗ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದಂತಹ ಶ್ರೀ ಹೆಚ್ ಎ ಶ್ರೀನಿವಾಸ ಮೂರ್ತಿಯವರು ಹಾಗೂ ರಾಜ್ಯ ಉಪಾಧ್ಯಕ್ಷರಾದಂತಹ ಶ್ರೀ ಶಾಂತರಾಜು ಅವರು ಗಾಯಕಿ ಡಾ.ವಿದ್ಯಾ ಕೆ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಾಯಕರ ಬಳಗದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .