ಸಲಿಂಗ ಕಾಮದ ಆರೋಪ –ಎಂ.ಎಲ್.ಸಿ ಡಾಕ್ಟರ್ ಸೂರಜ್ ರೇವಣ್ಣ ಅರೆಸ್ಟ್!?
ಹಾಸನ : ಜೆಡಿಎಸ್ ಕಾರ್ಯಕರ್ತನೊಬ್ಬ ನೀಡಿರುವ ದೂರಿನ ಆಧಾರದ ಮೇರೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರನ್ನು ಹಾಸನದ ಸೆನ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗಾಗಿ ಪೊಲೀಸರು ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದ್ದು ಶನಿವಾರ ತಡರಾತ್ರಿಯವರೆಗೆ ರಹಸ್ಯಸ್ಥಳದಲ್ಲಿ ಸೂರಜ್ ರೇವಣ್ಣ ಅವರನ್ನು ಪ್ರಶ್ನೆಗೊಳಪಡಿಸಿದ್ದಾರೆ.
ಇದುವರೆಗೂ ಪೊಲೀಸ್ ಮೂಲಗಳು ಸೂರಜ್ ರೇವಣ್ಣ ಬಂಧನವನ್ನು ಖಚಿತಪಡಿಸಿಲ್ಲ. ಆದರೆ ಪೊಲೀಸರ ವಿಚಾರಣೆಯ ಬಳಿಕ ಸೂರಜ್ ರೇವಣ್ಣ ಎಲ್ಲೂ ಹೊರಗೆ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೆಡಿಎಸ್ ಕಾರ್ಯಕರ್ತನೊಬ್ಬ ಸೂರಜ್ ರೇವಣ್ಣ ತನ್ನ ಮೇಲೆ ಲೈಂಗಿಕ ಹಲ್ಲೆಯೆಸಗಿದ್ದಾರೆಂದು ದೂರು ನೀಡಿದ್ದ. ದೂರುದಾರ ಯುವಕನ ವಿರುದ್ದ ಸೂರಜ್ ರೇವಣ್ಣ ಪ್ರತಿದೂರು ದಾಖಲಿಸಿದ್ದರು.