ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಲಂಚಬಾಕ ಉಪ ತಹಸೀಲ್ದಾರ್ ಸೋಮಪ್ಪ
ಹಾವೇರಿ : ಹಾವೇರಿ ಜಿಲ್ಲೆಯ ಕರ್ಜಗಿ ಉಪ ತಹಶೀಲ್ದಾರ್ ಅವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕರ್ಜಗಿ ಉಪ ತಹಶೀಲ್ದಾರ್ ಸೋಮಪ್ಪ ಶಿವಪ್ಪ ನಾಯ್ಕರ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟ್ರ್ಯಾಕ್ಟರ್ ನೋಂದಣಿ ಮಾಡಿಸಲು ಅಗತ್ಯವಿದ್ದ ಬೋನೊಫೈಡ್ ಪ್ರಮಾಣ ಪತ್ರ ನೀಡಲು ₹5 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಬಂಧಿಸಿದ್ದಾರೆ.
ಕಳ್ಳಿಹಾಳದ ಪಂಚಯ್ಯ ಹಿರೇಮಠ ಎಂಬುವವರು ಕೃಷಿ ಕೆಲಸಕ್ಕೆಂದು ತಮ್ಮ ಸಹೋದರನ ಹೆಸರಿನಲ್ಲಿ ಟ್ರ್ಯಾಕ್ಟರ್ ಖರೀದಿಸಿದ್ದರು. ಅದರ ನೋಂದಣಿ ಮಾಡಿಸಲು ಬೋನೊಫೈಡ್ ಪ್ರಮಾಣ ಪತ್ರದ ಅಗತ್ಯವಿತ್ತು. ಅದನ್ನು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಲೇವಾರಿ ಮಾಡಿ ಬೋನೊಫೈಡ್ ಪ್ರಮಾಣ ಪತ್ರ ನೀಡಲು ಸೋಮಪ್ಪ, ₹5 ಸಾವಿರ ಲಂಚ ಕೇಳಿದ್ದರು. ಮುಂಗವಾಡಿ ₹500 ಪಡೆದುಕೊಂಡಿದ್ದರು. ಈ ಬಗ್ಗೆ ಪಂಚಯ್ಯ ಅವರು ಮಾಹಿತಿ ನೀಡಿದ್ದರು.
ಬುದುವಾರ (ಜು.24) ರೂ. ಎರಡು ಸಾವಿರ ಹಣ ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೋಮಪ್ಪ ನಾಯ್ಕರ್ ಅವರ ಹಾವೇರಿಯ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತಿದೆ.
ಪ್ರತಿಯೊಂದು ಪೈಲ್ ಮೂಮೆಂಟ್ ಗೂ ಸೋಮಪ್ಪ ಹಣ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ದೂರು ಬಂದ ಹಿನ್ನೆಲೆ ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ