5 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕೆ.ಎ.ಎಸ್ ಅಧಿಕಾರಿ ತಹಸೀಲ್ದಾರ್ ವರ್ಷಾ
ಬೆಂಗಳೂರು: ಖಾತೆ ಮಾಡಿ ಕೊಡೋದಕ್ಕಾಗಿ ಲಂಚ ಸ್ವೀಕರಿಸುವ ವೇಳೆಯಲ್ಲಿಯೇ, ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ಕಂದಾಯ ಭವನದ ಕಚೇರಿಯಲ್ಲಿ ಖಾತೆ ಮಾಡಿ ಕೊಡೋದಕ್ಕಾಗಿ 5 ಲಕ್ಷ ಲಂಚ ಸ್ವೀಕರಿಸುವ ವೇಳೆಯಲ್ಲಿ ತಹಶೀಲ್ದಾರ್ ವರ್ಷಾ ಎಂಬ ಕೆಎಎಸ್ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಾರೆ.
ತಹಶೀಲ್ದಾರ್ ವರ್ಷಾ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಸಿ ಕೊಡೋ ಸಲುವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇಂದು 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿಯೇ ಬೆಂಗಳೂರಿನ ಕಂದಾಯ ಭವನದ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.