ಭಟ್ಕಳ- ಪ್ರಪ್ರಥಮ ಬಾರಿಗೆ ಕಿಕ್ ಬಾಕ್ಸಿಂಗ್ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು *ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024* ರಲ್ಲಿ ಭಾರತಪ್ರತಿನಿಧಿಸಿದ್ದರು.ಯುರೋಪಿನ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಅಗಸ್ಟ್ 23 ರಿಂದ ಸಪ್ಟೆಂಬರ್ 1 ರ ತನಕ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳಾದ 7 ರಿಂದ 9 ವರ್ಷ ವಯೋಮಿತಿಯ ಬಾಲಕಿಯರ *-18kg ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕವನ್ನು ಗೆದ್ದು ವಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ*.ಅವನಿ ಸೂರಜ್ ರಾವ್ ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾಳೆ.*
ಈ ಇಬ್ಬರು ವಿದ್ಯಾರ್ಥಿನಿಯರು ಜೊತೆಗೆ ನಾಗಶ್ರೀಯವರು ಭಾರತ ತಂಡದ ಕೋಚ್ ಆಗಿ ಭಾಗವಹಿಸಿದ್ದಳು. ಈ ವಿದ್ಯಾರ್ಥಿನಿಯರು ಭಟ್ಕಳದ *ನಾಗಶ್ರೀ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್* ನಲ್ಲಿ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.ಈ ಕಿಕ್ ಬಾಕ್ಸಿಂಗ್ ಪಟುಗಳಿಗೆ ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ನ ಅಧ್ಯಕ್ಷರಾದ *ಸಂತೋಷ ಕೆ* ಮತ್ತುಪ್ರಧಾನ ಕಾರ್ಯದರ್ಶಿಯಾದ *ಪೂಜಾ ಹರ್ಷ* ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗಿನ ಕೋಚ್ *ಹರ್ಷ ಶಂಕರ್* ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ *ಈಶ್ವರ ನಾಯ್ಕ* ಮತ್ತು ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ನ ಕೋಚ್ *ನಾಗಶ್ರೀ ನಾಯ್ಕ,* ಕಾನೂನು ಸಲಹೆಗಾರರಾದ *ಮನೋಜ್ ನಾಯ್ಕ* ಅಲೆಯನ್ಸ್ ಮಾರ್ಷಲ್ ಆರ್ಟ್ಸ್ ನ ಕೋಚ್ *ಇಸ್ಮಾಯಿಲ್,* ರೇವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ *ಜುಹೆಬ್,* ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿಯವರು ಅಭಿನಂದನೆಯನ್ನು ತಿಳಿಸಿದ್ದಾರೆ. ಹಾಗೂ ವಿದ್ಯಾರ್ಥಿನಿಯ ಕುಟುಂಬದವರು ಮತ್ತು ಭಟ್ಕಳದ ಜನತೆ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ.