ಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂ¨Aಧಿಸಿ ಹಾಗೂ ಅವೈಜಾನಿಕ ಕಸ್ತೂರಿರಂಗನ ವರದಿ ಕುರಿತು ಜರುಗುತ್ತಿರುವ ನ್ಯಾಯಯುತವಾದ ಅರಣ್ಯವಾಸಿಗಳ ಹೋರಾಟಕ್ಕೆ ರಾಜ್ಯದ ಪ್ರತಿಪ್ಠಿತ ಮಠಾಧೀಶರು ಬೆಂಬಲ ವ್ಯಕ್ತ ಪಡಿಸಿರುವುದಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹರ್ಷ ವ್ಯಕ್ತಪಡಿಸಿದೆ.
ಮಠಾಧೀಶರಾದ ಬಾಳೆಹೊನ್ನುರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ, ಕನ್ಯಾಡಿ ಉಜರೆ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅವರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಭಾಪುರಿ ಮಠಾಧೀಶರು ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿಯವರು ಅವರುಗಳು ಬಾಳೆಹೊನ್ನುರು ಮಠದಲ್ಲಿ ಮಲೆನಾಡು ಮತ್ತು ಕರಾವಳಿ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಮಲೆನಾಡು ಭಾಗದ ಬದುಕಿನ ಹಕ್ಕಿಗಾಗಿ ಜರಗುತ್ತಿರುವ ಸಮಸ್ಯೆಗಳ ಚಿಂತನಾ ಕುಟದಲ್ಲಿ ಭಾಗವಹಿಸಿ ಅರಣ್ಯವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಹ್ಮಾನಂದ ಸ್ವಾಮೀಜಿ ಅವರು ಇತ್ತೀಚಿಗೆ ದಶಲಕ್ಷ ಗಿಡನೆಡುವ ಅಭಿಯಾನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಿದ್ದರು ಎಂದು ಅವರು ಹೇಳಿದರು.
ಹೋರಾಟದ ಬಲ ಹೆಚ್ಚಳ:
ಸ್ವಾಮೀಜಿಗಳು ಸಾಮಾಜಿಕ ನ್ಯಾಯಾಲಯದ ಅಡಿಯಲ್ಲಿ ವಸತಿ ಮತ್ತು ಸಾಗುವಳಿ ಭೂಮಿಯಿಂದ ವಂಚಿತರಾಗುವAತ ರೈತ ಕುಟುಂಬಗಳ ಪರ ಧ್ವನಿಯಾಗಿ ನೀತಿರುವುದಕ್ಕೆ ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೃತಜತೆ ಸಲ್ಲಿಸಿದ್ದು ಹೋರಾಟಕ್ಕೆ ಇನ್ನು ಹೆಚ್ಚಿನ ಹೊಸತನ ಮತ್ತು ಬೆಂಬಲ ದೊರೆತಂತಾಗಿದೆAದು ಅಧ್ಯಕ್ಷ ರವೀಂದ್ರ ನಾಯ್ಕ ವ್ಯಕ್ತಪಡಿಸಿದ್ದಾರೆ