ಬೆಂಗಳೂರು- ಹೆಂಡತಿ ದುಡ್ಡಿನಾಸೆಗೆ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ವಾಸವಾಗಿದ್ದ ಅಣ್ಣಯ್ಯ ಬಾರ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ರು.
ಎಷ್ಟು ಗಂಟೆ ಕೆಲಸ ಮಾಡಿ ಮನೆಗೆ ಬಂದ್ರೂ ಹೆಂಡತಿ ನೀವು ಕೊಡುವ ದುಡ್ಡು ಸಾಲುತ್ತಿಲ್ಲ ಎಂದು ಜಗಳ ತೆಗೆಯುತ್ತಿದ್ದಳಂತೆ ಇದ್ರಿಂದ ಅಣ್ಣಯ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.
ದುಡ್ಡು ದುಡ್ಡು ಎನ್ನುತ್ತಾಳೆ ನನ್ನ ಹೆಂಡತಿ!ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಅವರು 5 ವರ್ಷಗಳ ಹಿಂದೆ ಉಮಾ ಎಂಬಾಕೆಯನ್ನು ಮದುವೆ ಅಗಿದ್ದರು. ದಂಪತಿ ಶ್ರೀನಗರದಲ್ಲಿ ವಾಸವಾಗಿದ್ದರು. ಅಣ್ಣಯ್ಯ ಬಾರ್ ಒಂದರಲ್ಲಿ ಕ್ಯಾಶಿಯರ್ ಅಗಿದ್ರು. ಎಷ್ಟು ದುಡಿದ್ರು ಹೆಂಡತಿ ದುಡ್ಡು ದುಡ್ಡು ಎನ್ನುತ್ತಿದ್ದಳಂತೆ ಇದೆ ವಿಚಾರಕ್ಕೆ ನಿತ್ಯ ಜಗಳವಾಡುತ್ತಿದ್ದಳು ಎಂದು ಅಣ್ಣಯ ಬೇಸತ್ತಿದ್ದರಂತೆ.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ
ನನ್ನ ಹೆಂಡತಿಗೆ ಅತಿಯಾದ ದುಡ್ಡಿನಾಸೆ ಇದೆ. ಬರೀ ದುಡ್ಡು ದುಡ್ಡು ಅಂತಾಳೆ ನಾನು ಎಷ್ಟು ದುಡಿದ್ರು ಸಾಕಾಗುವುದಿಲ್ಲ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟು ಬರೆದಿಟ್ಟು ಅಣ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.