ಶಿರಸಿ: ನ್ಯಾಯಾಲಯದ ಕೆಳ ಹಂತದ ನ್ಯಾಯಧೀಶರ ನೇಮಕದಲ್ಲಿ ಸಾಮಾಜಿಕ ನ್ಯಾಯ ಪಾಲಿಸುತ್ತಿರುವ ಸರ್ಕಾರವು, ಉಚ್ಛ ಮತ್ತು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡದೇ ಇರುವುದು ವಿಷಾದಕರ. ಈ ದೀಶೆಯಲ್ಲಿ ಸರ್ಕಾರದ ಗಂಭೀರ ಚಿಂತನೆ ಅವಶ್ಯ ಎಂದು ಸಾಮಾಜಿಕ ಹೋರಾಟಗಾರರ ಹಾಗೂ ಹಿರಿಯ ವಕೀಲ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ದಿ.೩ ರಂದು ಕರ್ನಾಟಕ ಜಾಗೃತ ವೇದಿಕೆಯ ಆಶ್ರಯದಲ್ಲಿ ಬೆಂಗಳೂರಿನ ಮೌರ್ಯ ಹೋಟೇಲ್ನ ಸಂಭಾಗಣದಲ್ಲಿ ಜರುಗಿದ “ರಾಜಕೀಯ ಪೀತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ” ಆದೇಶಗಳು ಎಂಬ ವಕೀಲರ ರಾಜ್ಯ ಮಟ್ಟದ ಸಮಾವೇ±ವÀನ್ನು ಉದ್ದೇಶಿಸಿ ಮಾತನಾಡುತ್ತ ಮೇಲಿನಂತೆ ಹೇಳಿದರು.
ಭಾರತದ ಸಂವಿಧಾನವು ಆಡಳಿತಾತ್ಮಕವಾಗಿ ಸಂವಿಧಾನ ಬದ್ಧ ಸಾಮಾಜಿಕ ನ್ಯಾಯದ ಪರಿಪಾಲನೆ ಆಗುತ್ತಿದೆ. ಇತ್ತೀಚಿಗೆ ನ್ಯಾಯಾಲಯದ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಮೀಸಲಾತಿ ಅಳವಡಿಸದೇ ಇರುವುದರಿಂದ ಸಾಮಾಜಿಕ ಪರಿಪಾಲನೆ ಮಾಡುವಲ್ಲಿ ಗಂಭೀರ ಚಿಂತನೆ ಅವಶ್ಯ. ಈ ಹಿನ್ನಲೆಯಲ್ಲಿ ರಾಷ್ಟಮಟ್ಟದಲ್ಲಿ ಚಿಂತನೆ ಆಗಬೇಕೇಂದು ವಕೀಲರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೂರ್ವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಸಂಘಟಕ ಹಾಗೂ ನಾಯ್ಯವಾದಿ ಅನಂತ ನಾಯ್ಕ ಸಂಘಟನೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾನೂನು ಚಿಂತನೆ:
ಕಾರ್ಯಕ್ರಮದಲ್ಲಿ, ರಾಜ್ಯಾದಂತ ನಿವೃತ್ತ ನಾಯ್ಯಾಧೀಶರು, ಹಿರಿಯ ವಕೀಲರು ಕಾನೂನು ತಜ್ಞರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ, ಪ್ರಚಲಿತ ರಾಜಕೀಯ ಧೂರಿಣರು ನ್ಯಾಯಾಲಯದ ಆದೇಶಗಳ ಕುರಿತು ಚಿಂತನ ವ್ಯಕ್ತಪಡಿಸಿದ್ದರು.