ಶಿರಸಿ: ಪಶ್ಚಿಮ ಘಟ್ಟದ ಸೂಕ್ಷö್ಮ ಪರಿಸರ ಕ್ಷೇತ್ರವನ್ನ ಗುರುತಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿರಂಗನ ವರದಿಗೆ ರಾಜ್ಯ ಸರ್ಕಾರ ತಿರಸ್ಕರಿಸಿರುವ, ಪ್ರಸ್ತಾವನೆಯಂತೆ ಸಂಪೂರ್ಣವಾಗಿ ಕೇಂದ್ರ ಸರ್ಕಾರ ವರದಿ ತಿರಸ್ಕರಿಸುವಂತೆ ಒತ್ತಡ ತರಬೇಕೇಂದು ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಗ್ರಹಿಸಿತು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಇಂದು ಮುಖ್ಯ ಮಂತ್ರಿಯವರ ಬೆಂಗಳೂರಿನ ಗೃಹ ಕಛೇರಿಯಲ್ಲಿ ಅವರನ್ನು ಭೇಟಿಯಾಗಿ ವರದಿ ತಿರಸ್ಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಾ, ಮೇಲಿನಂತೆ ಅವರು ಹೇಳಿದರು.
ಕರಡು ವರದಿಯನ್ನ ತಿರಸ್ಕರಿಸಲು ಫಶ್ಚಿಮ ಘಟ್ಟ ಪ್ರದೇಶದ ಜನರ ತೀವ್ರ ವಿರೋಧದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ತಿರಸ್ಕರಿಸಿರುವುದರಿಂದ ಸ್ಪಂಧಿಸಿರುವುದಕ್ಕೆ ರಾಜ್ಯದ ಕ್ರಮ ಸ್ವಾಗತಾರ್ಹ. ಅಲ್ಲದೇ, ಕೇಂದ್ರ ಸರ್ಕಾರದ ಮೇಲೆ ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸುವಂತೆ ಒತ್ತಡ ತರಲು ಅವರು ಮುಖ್ಯಮಂತ್ರಿಯಲ್ಲಿ ವಿನಂತಿಸಿಕೊAಡರು.
ಪ್ರಶಂಸನೀಯ ಕಾರ್ಯ:
ಅರಣ್ಯ ಭೂಮಿ ಹೋರಾಟದ ಸ್ಮರಣ ಸಂಚಿಕೆ ಹಾಗೂ ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಅನಾನೂಲತೆ ಕುರಿತು ಹೋರಾಟಗಾರರ ವೇದಿಕೆ ಪ್ರಕಟಿಸಿದ ಕರಪತ್ರ ಲಕ್ಷ ಕುಟುಂಬದಿAದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಆಕ್ಷೇಪಣಾ ಪತ್ರ ದಾಖಲೆಗಳನ್ನು ಪರೀಶಿಲಿಸಿ ಹೋರಾಟದ ಕಾರ್ಯಕ್ಕೆ ಮುಖ್ಯಮಂತ್ರಿಯವರು ಪ್ರಶಂಸಿಸಿದರು ಎಂದು ರವೀಂದ್ರ ನಾಯ್ಕ ತಿಳಿಸಿದರು.