ಬಿಎಂಟಿಸಿ ಬಸ್ ಡಿಕ್ಕಿಯಾಗಿ ಯೋಧ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಯೋಧ ಚೇತನ್(22), ಚಿಕಿತ್ಸೆ ಫಲಿಸದೆ ಗುರುವಾರ ನಿಧನರಾಗಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿನ್ನಕೋಟ ಗ್ರಾಮದವರಾಗಿದ್ದಾರೆ.
ಅಕ್ಟೋಬರ್ 7ರಂದು ಕಾಮಾಕ್ಷಿಪಾಳ್ಯ ಹತ್ತಿರ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಯಲಹಂಕ ಬಳಿಯ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ನಿಧನರಾಗಿದ್ದಾರೆ.
ಚೇತನ್ ತಂದೆ ಸುರೇಶ್ ಸಹ ನಿವೃತ್ತ ಯೋಧರಾಗಿದ್ದಾರೆ. ತಂದೆಯಂತೆ ಚೇತನ್ ಸಹ ಯೋಧರಾಗಿದ್ದರು. 3 ವರ್ಷಗಳಿಂದ ಚೆನ್ನೈ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಮೇಲೆ ಬಂದಾಗ ಅನಾಹುತ ನಡೆದಿದೆ.