ಮುರುಡೇಶ್ವರ-ಮುರುಡೇಶ್ವರ ಆರ್.ಎನ್.ಎಸ್ ಗಾಲ್ಫ್ ಮೈದಾನದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವರು, ಶಾಸಕರಾದ ಶ್ರೀ ಆರ್. ವಿ .ದೇಶಪಾಂಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯದ ಮೀನುಗಾರರಿಗೆ ನಮ್ಮ ಸರಕಾರ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದೆ ಈಗಾಗಲೇ ಒಳನಾಡು ಮಿನು ಪಾಲನೆ ಕೇಂದ್ರಗಳನ್ನು ರಾಜ್ಯದ ಹಲವೆಡೆ ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೂ ಅದೇ ರೀತಿಯಲ್ಲಿ ಕರಾವಳಿಯ ಭಾಗದ ಮೀನುಗಾರಿಕೆ ಹಾಗೂ ಮೀನುಗಳ ಬೆಳವಣಿಗೆಗಾಗಿ ಈಗಾಗಲೇ ಕೃತಕ ಬಂಡೆಗಳನ್ನು ಸಮುದ್ರದಲ್ಲಿ ಬಿಟ್ಟಿದ್ದು, ಅಲ್ಲದೆ ಬಂದರುಗಳ ಅಭಿವೃದ್ಧಿಗಾಗಿ ಯೋಜನೆ ಕೂಡಾ ರೂಪಿಸಲಾಗಿದೆ ಎಂದರು.
ವಿಶ್ವ ಪ್ರಸಿದ್ಧ ತಾಣವಾದ ಮುರುಡೇಶ್ವರದ ಆರ್ ಎನ್ ಎಸ್ ಗಾಲ್ಫ್ ಮೈದಾನದಲ್ಲಿ ನ.೨೧ರಿಂದ ೨೩ರವರೆಗೆ ರಾಜ್ಯ ಮಟ್ಟದ ಮತ್ತ್ಯ ಮೇಳ ನಡೆಯಲಿದ್ದು ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಕಾರಿಸ್ಟ್ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸನ ನಡೆಯಲಿದೆ. ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ .
ಮೀನುಗಾರರು ಹಿಡಿದು ತರುವ ವಿವಿಧ ಜಾತಿಯ ಮೀನುಗಳ ಸವಿಯನ್ನು ಸವಿಯಲು ಮೀನಿನ ಖಾದ್ಯ ಮೇಳ ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ. ಮೀನುಗಾರಿಕೆ ಸಚಿವ ಮಂಕಾಳ ವೈದ್ಯ , ಶಾಸಕರಾದ ಶ್ರೀ ಭೀಮಣ್ಣ ನಾಯ್ಕ, ಶ್ರೀ ಸತೀಶ್ ಸೈಲ್, ಶ್ರೀ ಶಿವರಾಮ್ ಹೆಬ್ಬಾರ್, ಯಶ್‘ಪಾಲ್ ಸುವರ್ಣ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.