ಶಿರಸಿ: ಕಸ್ತೂರಿರಂಗನ್ ವಿರೋಧಿಸಿ ಮತ್ತು ಅರಣ್ಯ ಹಕ್ಕುದೊಂದಿಗೆ ೬ ಬೇಡಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಪ್ರೀಡಮಂ ಪಾರ್ಕನಲ್ಲಿ ರಾಜ್ಯಾದಂತ ೧೬ ಜಿಲ್ಲೆಗಳೊಂದಿಗೆ ವಿಶಿಷ್ಟ ಕಲಾ ತಂಡದೊAದಿಗೆ ಹಾಗೂ ಕರ್ನಾಟಕದ ಹಿರಿಯ ಸಚಿವರು ಭಾಗವಹಿಸಿ ಸರ್ಕಾರದ ನಿರ್ದಿಷ್ಟ ಅರಣ್ಯವಾಸಿಗಳ ಪರ ಘೋಷಣೆಯೊಂದಿಗೆ ಇವತ್ತೀನ ಬೆಂಗಳೂರು ಚಲೋ ಕಾರ್ಯಕ್ರಮ ಯಶಸ್ವಿಯಾದವು.ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು.
ಬೇಡಿಕೆಗಳು:
ಕರಡು ಕಸ್ತೂರಿರಂಗನ್ ವರದಿಯನ್ನ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು, ನಿರ್ದಿಷ್ಟ ಅರಣ್ಯ ಹಕ್ಕು ಕಾಯಿದೆ, ಬುಡಕಟ್ಟು ಮಂತ್ರಾಲಯ ಹಕ್ಕು ನ್ಯೂವ್ ಡೆಲ್ಲಿ ಮತ್ತು ಗುಜರಾತ್ ಉಚ್ಛ ನ್ಯಾಯಾಲಯದ ಆದೇಶದಂತೆ ಮೂರು ತಲೆಮಾರಿನ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ, ೨೭-೪-೧೯೭೮ ರ ಪೂರ್ವದ ಅರಣ್ಯ ಮಂಜೂರಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ರಾಜ್ಯದಲ್ಲಿನ – ಪ್ರಕರಣಗಳ ಅರಣ್ಯವಾಸಿಗಳ ಕುಟುಂಬಕ್ಕೆ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸುವುದು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಆಪೀಲೆಗೆ, ಮಾನ್ಯತೆ ನೀಡುವುದು, ಕರ್ನಾಟಕದಲ್ಲಿ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳೊಳಗೊಂಡ ಉತ್ತರ ಕನ್ನಡ ಜಿಲ್ಲೆಯು ಸೇರಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಂಚಿತರಾದ ಅರಣ್ಯವಾಸಿಗಳ ಕುಟುಂಬಕ್ಕೆ ಪುನಃ ಅರ್ಜಿ ಸಲ್ಲಿಸುವ ಅವಕಾಶ ನೀಡುವುದು,ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಒಕ್ಕಲೇಬ್ಬೀಸುವ ಮತ್ತು ದೌಜನ್ಯ ಎಸಗುವ ಕ್ರಮವನ್ನ ನಿಯಂತ್ರಿಸುವುದು.
೧೦ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು:
ರಾಜ್ಯದಿಂದ ಭೂಮಿ ಹಕ್ಕಿಗೆ ಸಂಬAಧಿಸಿ ೨೦ ಕ್ಕೂ ಮಿಕ್ಕಿ ರಾಮು ಕೊಡುಗ, ಚಿಕ್ಕಣ್ಣ ಎಚ್.ಡಿ.ಕೋಟೆ, ಶಂಕರ ಡಂಮಾಣಿ ಗದಗ, ಪ್ರಕಾಶ ರಾಥೋಡ್ ಬಿಜಾಪುರ, ರಮಾನಂದ ನಾಯ್ಕ ಅಚವೆ ಬೀಮಶಿ ವಾಲ್ಮೀಕಿ, ಚಂದ್ರ ನಾಯ್ಕ ಬೆಳಕೆ, ಮಾಬ್ಲೆಶ್ವರ ನಾಯ್ಕ ಬೇಡ್ಕಣಿ, ವಿನಾಯಕ ಮರಾಠಿ, ನೆಹರು ನಾಯ್ಕ, ಚಂದ್ರು ಶಾನಭಾಗ, ಶಿವಾನಂದ ಜೋಗಿ, ರಾಮು ಮರಾಠಿ ಮುಂತಾದವರು ನೇತೃತ್ವದಲ್ಲಿ ರಾಜ್ಯಾದ್ಯಂತ ೧೦ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿದರು.