ಬ್ಲಾಕ್ ಮನಿಯನ್ನು ವೈಟ್ ಮಾಡಿತಾ ಚಿಲುಮೆ..?- ಡಿಕೆಶಿ ಹೊಸ ಬಾಂಬ್
ಬೆಂಗಳೂರು: ಮತ ಮಾಹಿತಿ ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಹೊಸ ಬಾಂಬ್ ಸಿಡಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಚಿಲುಮೆ ಸಂಸ್ಥೆ (Chilume Enterprises Private Limited) ಯಲ್ಲಿ ಬ್ಲಾಕ್ ಮನಿ ವೈಟ್ ಆಗಿದೆ. ನೋಟ್ ಕೌಂಟಿಂಗ್ ಮಿಷನ್ ಕೂಡ ಸಿಕ್ಕಿದೆ. ವೋಟರ್ ಲಿಸ್ಟ್ ಅಕ್ರಮ ಬಯಲಾಗಿದೆ.
ಸರ್ಕಾರ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿಲ್ಲ ಅಂತ ಕಿಡಿಕಾರಿದರು. ವೋಟರ್ ಲಿಸ್ಟ್ (Voter List) ನಲ್ಲೂ ಭ್ರಷ್ಟತನವನ್ನು ಮಾಧ್ಯಮದ ಮುಂದೆಯೂ ಇಟ್ಟಿದ್ದೇವೆ. ಆದರೆ ಸರ್ಕಾರ ಯಾರನ್ನೂ ಇದುವರೆಗೆ ಬಂಧನ ಮಾಡಿಲ್ಲ. ನೋಟ್ ಕೌಂಟಿಂಗ್ ಮಿಷನ್ ಕೂಡ ಅದೇ ಕಚೇರಿಯಲ್ಲಿ ಇದೆ. 2000 ರೂ. ಮೇಲೆ ಯಾರೂ ಹಣ ಇಸ್ಕೊಳ್ಳುವಂತಿಲ್ಲ. ಹಣದ ಅವ್ಯವಹಾರ ಕೂಡ ಚಿಲುಮೆ ಕಚೇರಿಯಲ್ಲಿ ನಡೆದಿದೆ.ಬ್ಲಾಕ್ ಮನಿ ವೈಟ್ ಮಾಡುವ ಕೆಲಸ ನಡೆದಿದೆ ಎಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.ಮತದಾರರ ಪಟ್ಟಿ ಕಳವು ಪ್ರಕರಣ ಸಂಬಂಧ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಯಲಾಗಿದೆ. ಈ ಬೆನ್ನಲ್ಲೇ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸುಮಾರು 20ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಯ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ. ಸದ್ಯ ಕಂಪ್ಯೂಟರ್ ನಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ವರದಿ ಆಕಾಶ್ ಚಲವಾದಿ ಬೆಂಗಳೂರು 9008827439