*ಲವ್ ಜಿಹಾದ್ ಆರೋಪ; ಯುವತಿಯ ಸಹೋದರನಿಂದ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲು*
*ಚಿಕ್ಕಮಗಳೂರು: ಅನ್ಯಕೋಮಿನ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ್ದಾನೆಂದು ಆರೋಪಿಸಿ ಮನೋಜ್ ಎಂಬಾತ ಕೊಪ್ಪ ತಾಲ್ಲೂಕಿನ ಹರಿಹರಪುರ ಠಾಣೆಯಲ್ಲಿ ದೂರು ದಾಖಲಿದ್ದಾರೆ.*
*ಯುವತಿಯ ಅಣ್ಣ ಲವ್ ಜಿಹಾದ್ ಪಿತೂರಿ ಅರೋಪ ಹೊರಿಸಿ ದೂರು ದಾಖಲು ಮಾಡಿದ್ದು, ಕೊಪ್ಪ ಮೂಲದ ಮೊಹಮ್ಮದ್ ರೋಫ್ ವಿರುದ್ಧ ಠಾಣೆಗೆ ದೂರು ನೀಡಲಾಗಿದೆ.*
*ಕೊಪ್ಪ ತಾಲ್ಲೂಕಿನ ಹರಿಹರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿಯೊಂದಿಗೆ ಯುವಕ ರೌಫ್ ಇರುವ ಪೊಟೊ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆಂದು ಆರೋಪಿಸಿ ದೂರು ನೀಡಲಾಗಿದೆ.*
*ಹರಿಹರಪುರ ಠಾಣೆಗೆ ದೂರು ನೀಡಿದ ಯುವತಿಯ ಸಹೋದರ ಮನೋಜ್, ದೂರು ನೀಡಿದರೂ ಸೆನ್ ಇನ್ಸೆಪೆಕ್ಟರ್ ಜಾಕೀರ್ ಹುಸೇನ್ ಆರೋಪಿಯನ್ನು ಬಂಧಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.*
*ಸಾಮಾಜಿಕ ಜಾಲತಾಣದ ಹಿನ್ನೆಲೆಯಲ್ಲಿ ಸೆನ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದ ಹರಿಹರಪುರ ಪೊಲೀಸರು ಅದರಂತೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗುತ್ತಿದೆ.*
*ಎಫ್ ಐಆರ್ ನಲ್ಲಿ ಮೊಹಮ್ಮದ್ ರೋಫ್ ಮೇಲೆ ಕೇಸ್ ದಾಖಲಾಗಿದ್ದು, ಯುವತಿ ಸಹೋದರ ಮನೋಜ್ ಅವರು ಎಸ್ಪಿಗೂ ಲಿಖಿತ ದೂರು ನೀಡಿದ್ದಾರೆ.*