ಮುಸ್ಲಿಂ ವ್ಯಕ್ತಿಯೊಂದಿಗೆ ಪುತ್ತೂರಿನ ಹಿಂದೂ ಯುವತಿ ವಿವಾಹವನ್ನು ಲವ್ ಜಿಹಾದ್ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ
ಪುತ್ತೂರು:ಅನ್ಯಧರ್ಮೀಯ ಜೋಡಿಯ ವಿವಾಹದ ಸರ್ಟಿಫಿಕೇಟ್ ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (34) ಮತ್ತು ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬವರ ಮುದವೆ ನವೆಂಬರ್ 9ರಂದು ರಿಜಿಸ್ಟರ್ ಆಗಿ ನಡೆದಿದೆ. ಈ ಕುರಿತು ಮ್ಯಾರೇಜ್ ರಿಜಿಸ್ಟ್ರೇಷನ್ ಲೆಟರ್ ವೈರಲ್ ಆಗಿದೆ.
ಪ್ರೀತಿ ಮಾಡಿ ಮದುವೆಯಾದ ಜೋಡಿಯ ವಿವಾಹವನ್ನು ಲವ್ ಜಿಹಾದ್ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ಹಿಂದುತ್ವ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದೆ.