*ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ,* *ತಾಯಿನಾಡು-ಗೋಳಿಹೊಳೆ* ಇದರ ಮಹಾ ಶಿವರಾತ್ರಿ ಹಬ್ಬದ ಆಚರಣೆ: ಫೆ: 17 ಮತ್ತು 18 ರಂದು ನಡೆಯಲಿದೆ.
*ಬೈಂದೂರು*: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ಶ್ರೀ ಕ್ಷೇತ್ರ ತಾಯಿನಾಡಿನ ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಹಾಶಿವರಾತ್ರಿ ಹಬ್ಬದ ಉತ್ಸವವು ಫೆ.17 ರಿಂದ 18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಫೆ.17 ರಂದು ಸನ್ನಿಧಾನದಲ್ಲಿ ಬೆಳಿಗ್ಗೆ ಶ್ರೀ ನಾಗದೇವರಿಗೆ ಕಲಾವೃದ್ಧಿ ಹೋಮ, ನವಕಪ್ರಧಾನ ಕಲಶಾಭಿಷೇಕ, ಮಹಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ.
ಸಂಜೆ ಪರಿವಾರ ದೈವಗಳಿಗೆ ಕಲಾವೃದ್ಧಿ ಹೋಮ, ನವಕುಂಭ ಕಲಶಾಭಿಷೇಕ, ಮಹಾಪೂಜೆ ನಡೆಯಲಿರುವುದು.
ದಿ.18 ರಂದು ಶನಿವಾರ ಬೆಳಿಗ್ಗೆ 8ಕ್ಕೆ ಶ್ರೀ ಗಣಪತಿ ದೇವರಿಗೆ ಗಣಹೋಮ, ಶ್ರೀ ದೇವಿಗೆ ದುರ್ಗಾ ಹೋಮ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಅಲಂಕಾರ ಪೂಜೆ. ಮಧ್ಯಾಹ್ನ12.30ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ “ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.
ಸಂಜೆ 6.30 ರಿಂದ *ಶ್ರೀ ಸಿದ್ಧಲಿಂಗೇಶ್ವರ ದೇವರಿಗೆ* *ಏಕಾದಶ ರುದ್ರಾಭಿಷೇಕ*, *ಬಿಲ್ವಾರ್ಚನೆ*, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿರುವುದು.
ರಾತ್ರಿ 10 ಗಂಟೆಯಿಂದ ಮಧ್ಯ ರಾತ್ರಿಯ ತನಕ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಹಾಗೂ ಲಘು ಉಪಹಾರ ವ್ಯವಸ್ಥೆ ನಡೆಯಲಿರುವುದೆಂದು ಶ್ರೀ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಯರಾಮ ಪೂಜಾರಿ ಮತ್ತು ಕುಟುಂಬಸ್ಥರು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.