ಮಲ್ಪೆ: ಬಂದರಿನ ಒಳಗೆ ಕಾಲು ಜಾರಿ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಕಟಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ(35) ಎಂದು ಗುರುತಿಸಲಾಗಿದೆ.
ಇವರು ಜೈಬಲರಾಮ್ ಲೈ ಲ್ಯಾಂಡ್ ಬೋಟ್ ಪಡ್ಡೆಗಳ ಹೋಗುವಾಗ ಬಂದರಿನ ಒಳಗೆ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ ಇದರಿಂದ ನೀರಿನ ಒಳಗಿನ ಹೂಳಿನಲ್ಲಿ ಸಿಲುಕಿಕೊಂಡು ಐವರು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.