ಕೆಲಸಕ್ಕೆ ಹೋಗುತ್ತೆನೆಂದು ಹೇಳಿ ಮನೆಯಿಂದ ಹೋರಟ ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗಳೊಂದಿಗೆ ನಾಪತ್ತೆ
ಉಡುಪಿ- ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗಳೊಂದಿಗೆ ನಾಪತ್ತೆಯಾದ ಘಟನೆ ಮಲ್ಪೆ ಸಮೀಪದ ಹೂಡೆ ಎಂಬಲ್ಲಿ ನಡೆದಿದೆ.
ಪಡುತೋನ್ಸೆ ಹೂಡೆ ನಿವಾಸಿ ಉಸ್ತಾದ್ ಜುಬೈರ್ ಅವರ ಪತ್ನಿ ಅನ್ಸಿಯಾ ಮತ್ತು ಅವರ ಒಂದು ವರ್ಷದ ಮಗಳು ಅಜೀನ್ ನಾಪತ್ತೆಯಾದವರು.
ನ.7ರಂದು ಆನ್ಸಿಯಾ ತನ್ನ ಮಗುವಿನೊಂದಿಗೆ ಬೆಳಗ್ಗೆ 10 ಗಂಟೆಗೆ ತಾನು ಕೆಲಸ ಮಾಡುತ್ತಿರುವ ಹೈರಿಚ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು ಸಂಜೆ ೫ ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ.
ಈ ಪ್ರಕರಣವು ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.