ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಯವರು ಆಧ್ಯಾತ್ಮಿಕ ಕಾರ್ಯಕ್ರಮ ಗಳಿಗಾಗಿ ಇಂದು ಸ್ವಂತ ಸ್ಥಳದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಸಿ ಅದರ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರೋದು ಒಂದು ರೀತಿಯಲ್ಲಿ ವಿಭಿನ್ನ ರಹಸ್ಯ ಎಂದು ತಿಳಿದು ಕೊಳ್ಳಬಹುದು ಎಂದು ಶ್ರೀ ಶ್ರೀ ಶ್ರೀ ವೇಧವರ್ಧನ ಶ್ರೀ ಪಾದಂಗಳವರ ಆಶೀರ್ವಚನ ನೀಡುತ್ತಾ ತಿಳಿಸಿದರು.ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರದಲ್ಲಿ ಸ್ವಂತ ಕಚೇರಿಯನ್ನು ಹೊಂದಿರುವುದೂ ಅಲ್ಲದೇ ಯಕ್ಷಗಾನ, ಭಕ್ತಿ ಗಾನ ಯಾನ ಸುಮಧುರ ಗೀತೆಗಳಿಗೆ ಹಾಗೂ ಪ್ರವಚನ ಇತರೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಬೀಜಾಡಿಯಲ್ಲಿ ತಮ್ಮ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಇಂದು ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಒಂದು ದೊಡ್ಡ ಮೈಲಿಗಲ್ಲು ಎಂದು ತಿಳಿಸಿದರು.ಹಿಂದೂ ಸನಾತನ ಧರ್ಮದ ಅಮೂಲ್ಯ ಉಳುವಿಗಾಗಿ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ವಿಭಿನ್ನ ಮಾರ್ಗಗಳನ್ನು ಹೊಂದಿದೆ.ಸಾಮ ಭೇದ ದಂಡ ಎಂಬಾ ಪ್ರಮುಖ ವಿಷಯಗಳಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ಸಾಮಾಜಿಕ ವಾಣಿಯನ್ನು ಹೊಂದಿರುವ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಹೀಗೆ ನಿತ್ಯ ನಿರಂತರ ಹೊಸತನ ದೊಂದಿಗೆ ಮುನ್ನೆಡೆಯಲಿ ಎಂದು ಶುಭಾಶೀರ್ವಾದ ನೀಡಿದರು.ಆದಷ್ಟು ಬೇಗ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯಲಿ ಎಂದು ತಿಳಿಸುತ್ತಾ ನಾವೆಲ್ಲರೂ ಸನಾತನ ಧರ್ಮದ ಉಳಿವಿಗಾಗಿ ನಿತ್ಯ ನಿರಂತರ ವಾಗಿ ಹೊಸತನದ ಅಭಿರುಚಿ ಹೊಂದಿರುವ ಅಧ್ಯಾತ್ಮ ರಹಸ್ಯ ಮಾಸಪತ್ರಿಕೆಯ ಜೊತೆ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸುಮಾರು ಎಂಟು ಪ್ರಶಸ್ತಿ ಪುರಸ್ಕಾರವನ್ನು ಸಾಧಕರಿಗೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಅಭ್ಯಗತರಾಗಿ ಶ್ರೀ ರಾಮ್ ಕಾರಂತರು, ಶ್ರೀ ಅಶೋಕ್ ಪೂಜಾರಿ ಬೀಜಾಡಿ, ಶ್ರೀ ಕೆ ಆರ್ ನಾಯ್ಕ್ ಹಂಗಳೂರು, ಶ್ರೀ ಕೃಷ್ಣಾನಂದ ಹೆಗ್ಡೆ,ಜೀ ಶೀನ ಮರಕಾಲರು, ಶ್ರೀ ಬಿ.ಕೆ.ಮೋಹನ್ ಭಾಯಿಜೀ, ಶ್ರೀ ಬಿ.ಕೆ.ನಾಗೇಶ್, ಶ್ರೀ ನವೀನ್ ಹೆಗ್ಡೆ ಶಾನಾಡಿ, ಶ್ರೀ ಮಮತಾ ಎಸ್ ನಾಯ್ಕ್ ಉಪಸ್ಥಿತರಿದ್ದರು.ಸುಮಾರು 7 ಸಂಸ್ಥೆಯ ಮುಖ್ಯಸ್ಥ ರಾದ ಶ್ರೀ ಎಸ್ ಸತೀಶ್ ಕುಮಾರ್ ಕೋಟೇಶ್ವರ ಇವರು ಎಲ್ಲಾ ಅತಿಥಿ ಅಭ್ಯಗತರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಮಂಜುನಾಥ ಕುಂದೇಶ್ವರ ಇವರು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುಂಚೆ ಶ್ರೀ ಶ್ರೀ ವೇಧವರ್ಧನ ಶ್ರೀ ಪಾದಂಗಳವರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆಯವರ ಸಾಂಸ್ಕೃತಿಕ ಕಚೇರಿಯ ಮುಖ್ಯ ದ್ವಾರ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಶ್ರೀ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪುರಸ್ಕೃತರಾದ ಶ್ರೀ ರೂಪೇಶ್ ಕಲ್ಮಾಡಿ, ಶ್ರೀ ಕೆ ಆರ್ ನಾಯ್ಕ್ ರವರ ಪ್ರಶಸ್ತಿ ಉತ್ತಮ ಕಾಯಕಯೋಗಿ 2025 ರ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಟಿ ಗಣಪತಿ ಶ್ರೀಯಾನ್, ಶ್ರೀ ಕೃಷ್ಣಾ ನಂದ ಹೆಗ್ಡೆ ಜೀ ಯವರ ಹೆಸರಿನಲ್ಲಿ ನೀಡುವ ಉತ್ತಮ ಕೃಷಿಕಾ ಪ್ರಶಸ್ತಿ -2025 ಪುರಸ್ಕೃತ ರಾದ ಶ್ರೀ ನವೀನ್ ಕುಮಾರ್ ಹೆಗ್ಡೆ ಶಾನಾಡಿ, ಶ್ರೀ ದಾದಾ ಲೇಖಕ್ ರಾಜ್ ಹೆಸರಿನಲ್ಲಿ ನೀಡಲ್ಪಡುವ ದಾದ ಲೇಖಕ್ ರಾಜ್ ಪುರಸ್ಕಾರ -2025 ಪುರಸ್ಕೃತ ರಾದ ಶ್ರೀ ಶ್ರೀ ರಾಮ್ ಕಾರಂತರು, ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಯವರ ಉತ್ತಮ ಧಾರ್ಮಿಕ ಕ್ಷೇತ್ರಗಳಲ್ಲಿ ನ ಸೇವೆಗೆ ನೀಡುವ ಉತ್ತಮ ಧಾರ್ಮಿಕ ವ್ಯಕ್ತಿ ಪ್ರಶಸ್ತಿ -2025 ಪುರಸ್ಕೃತ ರಾದ ಶ್ರೀ ಗಣೇಶ ಮೂಡೂರ ಪೂಜಾರಿ, ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಯವರ ಶ್ರೀ ಸ್ವಾಮಿ ವಿವೇಕಾನಂದ ಪ್ರಶಸ್ತಿ -2025 ಪುರಸ್ಕೃತ ರಾದ ಖ್ಯಾತ ಜ್ಯೋತಿಷಿ ಶ್ರೀ ವಸಂತ ಜೋಗಿ ಮತ್ತು ಓಂ ಶಾಂತಿ ಪ್ರೋಡಕ್ಷನ್ಸ್ ರಿ ಕೋಟೇಶ್ವರ ಇವರ ಹೆಸರಿನಲ್ಲಿ ನೀಡಲ್ಪಡುವ ಪಿತಾ ಶ್ರೀ ಶ್ರೀ ಜಿ ಶೀನ ಮರಕಾಲ ರ ಹೆಸರಿನ ಯಶಸ್ವಿ ಧಾರ್ಮಿಕ ತಂಡ ಪುರಸ್ಕೃತರಾದ ಶ್ರೀ ವಿಠೋಬ ಭಜನಾ ಮಂದಿರ ಮಣೂರು ಪಡುಕರೆ ಉಡುಪಿ ಜಿಲ್ಲೆ ಇವರು ಸೇರಿ ಎಲ್ಲಾ ಪ್ರಶಸ್ತಿ ಪುರಸ್ಕೃತರೂ ಉಪಸ್ಥಿತರಿದ್ದರು.ನಂತರ ಶ್ರೀ ವಿಠೋಬ ಭಜನಾ ಮಂದಿರ ಮಣೂರು ಇವರಿಂದ ಭಕ್ತಿ ಪ್ರಧಾನ ಸುಶ್ರಾವ್ಯ ಭಜನಾ ಕಾರ್ಯಕ್ರಮ ನಡೆಯಿತು.ಪಿತಾಶೀ ಜಿ ಶೀನ ಮರಕಾಲ ಇವರಿಗೆ 90 ವರುಷದ ಸಂಭ್ರಮ ಸಡಗರದ ಹುಟ್ಟು ಹಬ್ಬದ ಶುಭಾಶಯಗಳ ಜೊತೆ ಸಿಹಿ ತಿಂಡಿ ವಿತರಣೆ ನಡೆಯಿತು.ಶ್ರೀ ಬ್ರಹ್ಮ ಲಿಂಗೇಶ್ವರ ಯಕ್ಷ ಕಲಾ ಸೇವಾ ಟ್ರಸ್ಟ್ ರಿ ಬೀಜಾಡಿ ಇದರ ಸದಸ್ಯರು ಹಾಗೂ ಖ್ಯಾತ ಭಾಗವತರ ಹಿಮ್ಮೇಳದೊಂದಿಗೆ ಅತಿಥಿ ಕಲಾವಿದರ ಕೂಡೂವಿಕೆಯಲ್ಲಿ ಕದಂಬ ಕೌಶಿಕೆ ಯಕ್ಷಗಾನ ಬಯಲಾಟ ಪ್ರದರ್ಶನ ಕೂಡ ನಡೆಯಿತು.ಈ ಎಲ್ಲಾ ಕಾರ್ಯಕ್ರಮ ದ ನಿರೂಪಣೆ ಕಾರ್ಯಕ್ರಮ ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ಶ್ರೀ ಮಂಜುನಾಥ ಕುಂದೇಶ್ವರ ಇವರು ಉತ್ತಮವಾಗಿ ನಡೆಸಿಕೊಟ್ಟರು.