ವಿಶ್ವಕರ್ಮ ಸಮಾಜದವರು ಸಂಘಟಿತರಾಗಿ ಹೋರಾಟ ಮಾಡುವುದರ ಮೂಲಕ ನ್ಯಾಯ ಪಡೆದುಕೊಳ್ಳಲು ಸಾಧ್ಯ
ನಾಗಮಂಗಲ. ನ:- 23 ರಾಜ್ಯದ ಪ್ರತಿಯೊಂದು ಜಿಲ್ಲಾ ತಾಲೂಕು ಹೋಬಳಿ ಗ್ರಾಮಾಂತರ ಪ್ರದೇಶಗಳಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಸಂಘಟನಾತ್ಮಕವಾಗಿ ಹೋರಾಟ ಮಾಡುವ ಮುಖಾಂತರ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಜಿಲ್ಲಾ ಮಹಾಸಭಾ ಅಧ್ಯಕ್ಷರಾದ ಆನಂದಚಾರ್ ತಿಳಿಸಿದರು.
ಅವರು ನಾಗಮಂಗಲದ ವಿಶ್ವಕರ್ಮ ಸಮಾಜದ ಸಂಘದ ಕಚೇರಿಯಲ್ಲಿ ಮುಂದಿನ ದಿನಗಳಲ್ಲಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ನಿಟ್ಟಿನಲ್ಲಿ ಬೀದರ್ ಇಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಲು ನಮ್ಮ ಸಮಾಜದ ನಾಯಕರಾದ ಕೆ ಪಿ ನಂಜುಂಡಿ ಅವರ ಸಾಹಿತ್ಯದಲ್ಲಿ ಸಾರಥ್ಯದಲ್ಲಿ ಪಾದಯಾತ್ರೆಯ ಅಭಿಯಾನ ಆರಂಭಗೊಳ್ಳಲಿದ್ದು ರಾಜ್ಯದ ಪ್ರತಿಯೊಂದು ಹಳ್ಳಿ ಹೋಬಳಿ ಮಟ್ಟದಲ್ಲಿ ಸಂಘಟನಾ ಸಂಘಟನೆಗಳು ಚುರುಕು ಗೊಳ್ಳುವ ಮುಖಾಂತರ ನಮ್ಮ ಬದ್ಧತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಮ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನ ಮಾಡಲು ಮೈಸೂರು ವಿಶ್ವವಿದ್ಯಾನಿಲಯ ಶಿಫಾರಸ್ಸು ಮಾಡಿದ್ದು ನಮ್ಮಗಳ ನ್ಯಾಯ ಬದ್ಧತೆಯನ್ನು ಪಡೆದುಕೊಳ್ಳಲು ಒಗ್ಗಟ್ಟಾಗಿ ಹೋರಾಟದ ಅನಿವಾರ್ಯತೆ ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕೆ ಪಿ ನಂಜುಂಡಿ ಅವರ ಸೇವಾ ಸಾಧನೆಗಳು ನಮ್ಮ ಸಮುದಾಯದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಹೀಗೆ ಹಲವಾರು ಬೇಡಿಕೆಗಳನ್ನ ಹೋರಾಟದ ಪರಿಸ್ಥಿತಿಯ ಫಲಶ್ರುತಿಯಾಗಿದ್ದು ಇಂದು ಮೀಸಲಾತಿಗಾಗಿ ಹೋರಾಟದ ಹೆಜ್ಜೆಗೆ ನಾವುಗಳು ಸುಮಾರು 45 ಲಕ್ಷ ವಿಶ್ವಕರ್ಮ ಜನಾಂಗ ಕೈಜೋಡಿಸುವ ಮುಖಾಂತರ ಬೆಂಬಲವಾಗಿರಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಭೋಗಾದಿ ಗ್ರಾಮದ ಶ್ರೀಧರ ಆಚಾರ್ ಅವರ ಮಗಳು ದ್ವಿತೀಯ ಪಿಯುಸಿಯಲ್ಲಿ ಶೇಕಡ 95 ಅಂಕ ಪಡೆದು ಸರಕಾರಿ ಪ್ಯಾರ ಮೆಡಿಕಲ್ ಅವಕಾಶ ಸಿಕ್ಕಿದ್ದು ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.
ನಾಗಮಂಗಲ ಪಟ್ಟಣದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರಾಗಿ ಅಶೋಕ್ ಎಲ್ಲಾ ಹೋಬಳಿ ಕೇಂದ್ರಗಳಿಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಬಿಂಡಿಗನವಿಲೆ ಹೋಬಳಿ ಅಧ್ಯಕ್ಷರಾಗಿ ಶಿವಕುಮಾರ್ ದೇವಲಾಪುರ ಹೋಬಳಿಯ ಅಧ್ಯಕ್ಷರಾಗಿ ರಾಜೇಶ್ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಕೃಷ್ಣಚಾರ್ ಹಾಗೂ ದಿವಾಕರ್ ತೊಳಲಿ ಮಂಜುನಾಥ್ ಪಾರ್ಥಸಾರಥಿ ನಾಗೇಶ್ ವಿಶ್ವಮೂರ್ತಿ ಉಮೇಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
ದೇವಲಾಪುರ ಜಗದೀಶ್ ನಾಗಮಂಗಲ