ಸಮಾಜ ಸೇವೆಯಲ್ಲಿ ಫೈಟರ್ ರವಿ ಅವರ ತ್ರಿಕಲ್ಪ ಯೋಜನೆಯ ಕನಸಿನ ಗುರಿ
ನಾಗಮಂಗಲ. ನ:- 26 ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಫೈಟರ್ ರವಿ ಅವರು ಶಿಕ್ಷಣದ ಜೊತೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಸಹಾಯಸ್ಥ ನೀಡುವುದಾಗಿ ಫೈಟರ್ ರವಿ ಅವರು ತಿಳಿಸಿದರು.
ಅವರು ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ವಿವಿಧ ಸರ್ಕಾರಿ ಪ್ರೌಢಶಾಲೆ , ವಡೇರಪುರ ಹಟ್ನಾ ಕೆಂಬಾರೆ. ಕಾಳಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಹಾಗೂ ಶಿಕ್ಷಣಕ್ಕೆ ಕುಡಿಯುವ ನೀರು ಶಾಲಾ ಕಾರ್ಯಕ್ರಮಗಳಿಗೆ ಸಹಾಯದ ಭರವಸೆ ನೀಡಿದರು.
ಸಾಮಾಜಿಕ ಸೇವೆಗಳಲ್ಲಿ ಆರೋಗ್ಯ ಶುದ್ಧ ನೀರು ಶಿಕ್ಷಣ ಶೈಕ್ಷಣಿಕ ಪ್ರಗತಿಯತ್ತ ತಾಲೂಕಿನ ಎಲ್ಲಾ ಶಾಲೆಗಳಿಗೂ ಕೈಲಾದ ಸಹಾಯ ಮಾಡುತ್ತಿರುವ ಸಮಾಜ ಸೇವಕರಾದ ರವಿಯವರು ತಾಲೂಕಿನ ಅಭಿವೃದ್ಧಿಯ ಮುಂಚೂಣಿಗೆ ಹೊಸ ಅಧ್ಯಯನ ಬರೆಯಲು ಇವರ ಕನಸಿನ ಗುರಿ ತ್ರಿಕಲ್ಪ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.
ರವಿಯವರು ಇಂದು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಆಟದ ಸಾಮಗ್ರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸುವ ಭರವಸೆ ನೀಡುವ ಮುಖಾಂತರ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ಕೊಡುವ ಭರವಸೆಯ ಆಶಾ ಕಿರಣವಾಗಿದೆ.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ತಿಮ್ಮರಾಯಗೌಡ ಲೋಕೇಶ್ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿಜೆ ಕುಮಾರ್ ಹಾಗೂ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಲಾಪುರ ಜಗದೀಶ್ ನಾಗಮಂಗಲ