ಕ್ರೀಡೆಗಳು ಯೋಗಭ್ಯಾಸದಿಂದ ಉತ್ತಮ ಆರೋಗ್ಯ ಮತ್ತು ಜ್ಞಾನಾಭಿವೃದ್ಧಿಯಾಗಲಿದೆ
ನಾಗಮಂಗಲ. ನ:- 29 ಕ್ರೀಡೆಗಳು ಮತ್ತು ಯೋಗಭ್ಯಾಸದಿಂದ ಉತ್ತಮ ಆರೋಗ್ಯ ಮತ್ತು ಜ್ಞಾನಾಭಿವೃದ್ಧಿಯಾಗಲಿದ್ದು ಇಂತಹ ಉನ್ನತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭಾವಂತರಾಗಿ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ನುಡಿದರು.
ಅವರು ನಾಗಮಂಗಲ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬಿಜಿ ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನ ಖೋ ಖೋ ಪಟು ಕು. ಲಿಖಿತ ಎಸ್ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಸ್ ಮದನ್ ಗೌಡ ಇವರನ್ನು ಅಭಿನಂದಿಸಿ ಮಾತನಾಡಿದರು.
ಜಿಲ್ಲಾಮಟ್ಟದ ಸ್ಪರ್ಧೆಗಳಾದ ಹರ್ಟಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಮಿತಾ, ಉದ್ದ ಜಗಿತದಲ್ಲಿ ದ್ವಿತೀಯ ಸ್ಥಾನ ಪಡೆದ ಸಾನ್ವಿಕ ಎಲ್, ಡಿಸ್ಕಸ್ ತ್ರೋನಲ್ಲಿ ಪ್ರಥಮ ಸ್ಥಾನ ಪಡೆದ ಸುಗಿಧಾ ಎಸ್, ಜಾವಲಿನ್ ನಲ್ಲಿ ಮಿಥುನ್ ಹಾಗೂ ಗುಂಡು ಎಸೆತ, ಎತ್ತರ ಜಿಗಿತ, ವಾಲಿಬಾಲ್ ನಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಕ್ಷಿತ್, ಶಶಾಂಕ್ ಸೇರಿದಂತೆ ಇತರರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಯೋಗಾನಂದ ಕೆ ಸಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಯೋಗೇಶ್ ಎಚ್ ಎನ್, ಚೇತನ್ ಮತ್ತು ಇತರರು ಹಾಜರಿದ್ದರು.