ಸಮಾಜದಲ್ಲಿ ಅಂಗವಿಕಲತೆಯ ಬಗ್ಗೆ ಕೀಳರಿಮೆ ಬೇಡ
ನಾಗಮಂಗಲ. ಡಿ:- 3 ಅಂಗವಿಕಲತೆ ಬಗ್ಗೆ ಕೀಳಿರಿಮೆ ಬೇಕಿಲ್ಲ ಬದುಕಲು ದಾರಿಗಳಿವೆ ಎಂದು ನಾಗಮಂಗಲ ಪುರಸಭೆ ಅಧ್ಯಕ್ಷರಾದ ಆಶಾ ವಿಜಯಕುಮಾರ್ ತಿಳಿಸಿದರು.
ಅವರು ನಾಗಮಂಗಲ ಸೌಮ್ಯಕೇಶವಸ್ವಾಮಿ ದೇವಾಲಯದ ಬಳಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಕಲ ಚೇತನರಿಗೆ ಉಡುಪು ಹಾಗೂ ಹೊಲಿಗೆ ಯಂತ್ರ ವಿತರಣೆ ಮಾಡುತ್ತ ಮಾತನಾಡಿದರು.
ಅಂಗವಿಕಲತೆ ಅನಿರೀಕ್ಷಿತವಾದದು ಅವರಿಗೆ ವಿಶೇಷವಾದಶಕ್ತಿ ದೇವರು ನೀಡಿದ್ದು ಅದರ ಮೂಲಕ ತಮ್ಮ ಜೀವನವನ್ನು ಉತ್ತಮ ರೀತಿ ಸಾಗಿಸುವಂತೆ. ಇರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆನೀಡಿದರು.
ಇದೇ ಸಂದರ್ಭದಲ್ಲಿ ಉಪನೊಂದಣಾದಿಕಾರಿ ಮಹೇಶ್ ರವರು ವಿಕಲ ಚೇತನರಿಗೆ ಹೊಲಿಗೆಯಂತ್ರವನ್ನು ಕೋಡುಗೆ ನೀಡಿ ಅವರ ಬದುಕಿಗೆ ನೆರವಾಗಿದ್ದಾರೆ.
ಸವಿತ ಸಮಾಜ ರವಿಕುಮಾರ್ ರವರು ವಿಕಲ ಚೇತನರಿಗೆ ಉಡುಪುಗಳನ್ನು ನೀಡಿದರು.
ಕಾರ್ಯರ್ಕಮದಲ್ಲಿ ನಿವೃತ್ತ ನೌಕರ ಶಿವಗಂಗಯ್ಯ ಹಾಗೂ ಶ್ರೀನಿವಾಸ್ ದೇಶಪ್ರೇಮಿ ಉಪಸ್ಥಿತರಿದ್ದು ಸುಕನ್ಯ ಶ್ರೀನಿವಾಸ್ ಕಾರ್ಯಕ್ರಮ ಆಯೋಜಿಸಿದ್ದರು.
ದೇವಲಾಪುರ ಜಗದೀಶ್ ನಾಗಮಂಗಲ