ಸಂವಿಧಾನಬದ್ಧ ಸರ್ಕಾರ ಸಾಮಾಜಿಕ ಬದುಕಿನ ಭದ್ರತೆಯ ನೀಡುವಂತೆ ಒತ್ತಾಯ
ನಾಗಮಂಗಲ. -ಸಾಮಾನ್ಯ ನೌಕರನಿಗೆ ಸಂವಿಧಾನ ಬದ್ಧ ಸರ್ಕಾರಗಳು ಬದುಕಿನ ಸಾಮಾಜಿಕ ಭದ್ರತೆಯ ಒದಗಿಸುವಂತೆ ನಮ್ ಹಕ್ಕು ಒತ್ತಾಯ ಹೋರಾಟವಾಗಿದೆ ಎಂದು ರಾಜ್ಯಾಧ್ಯಕ್ಷರಾದ ಶಾಂತರಾಮ್ ತಿಳಿಸಿದರು.
ಅವರು ನಾಗಮಂಗಲದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಎನ್ ಪಿಎಸ್ ನೌಕರರ ಸಂಘ ಹಳೆ ಪಿಂಚಣಿ ಹಕ್ಕುತಾಯ ಬೃಹತ್ ಪಾದಯಾತ್ರೆ ಟಿಬಿ ಬಡ ವಣೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಹೋರಾಟ ಸರ್ಕಾರದ ವಿರುದ್ಧವಾಗಲಿ ಅಲ್ಲ ನಮ್ಮ ಸಾಮಾನ್ಯ ಸರ್ಕಾರಿ ನೌಕರರಿಗೆ ಸಿಗಬೇಕಾದ ಸಾಮಾಜಿಕ ಮೌಲ್ಯ ಆರ್ಥಿಕ ಭದ್ರತೆಯ ಬದುಕಿನ ಹೋರಾಟದ ಪ್ರಶ್ನೆಯ ಅಂಗವಾಗಿ ನಮ್ಮ ಹೋರಾಟದ ಅಸ್ತ್ರವಾಗಿದೆ ಕೇವಲ ಇದು ಹೋರಾಟವಾಗದೆ ಮುಂದಿನ ದಿನಗಳಲ್ಲಿ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲವಾದರೆ ಕೇವಲ ಕರ್ನಾಟಕ ರಾಜ್ಯವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಈ ಹೋರಾಟ ನಡೆಯುತ್ತಿದ್ದು ಸರ್ಕಾರ ಆರ್ಥಿಕ ಭದ್ರತೆಯನ್ನು ಜಾರಿಗೆ ತರುವಲ್ಲಿ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕು ಘಟಕ ಹಮ್ಮಿಕೊಂಡಿದ್ದ ಪಾದಯಾತ್ರೆ ಮುಖಾಂತರ ಮಿನಿ ಸೋದನ ಮಿನಿ ವಿಧಾನಸೌಧಕ್ಕೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ್ ಜಿಲ್ಲಾಧ್ಯಕ್ಷರಾದ ಚಿಕ್ಕ ರಾಜು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಎಲ್ಲಾ ಸರ್ಕಾರಿ ನೌಕರರು ಸಂಘದ ಸದಸ್ಯರುಗಳು ಭಾಗವಹಿಸಿದ್ದರು.