‘
ಮಕ್ಕಳ ಗ್ರಾಮ ಸಭೆ’: ಶಾಲೆಯ ಅಗತ್ಯತೆ, ಮೂಲಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಚರ್ಚೆ!ಮಕ್ಕಳ ಅಗತ್ಯತೆಗಳನ್ನು ಪೂರೈಸಲು ಸಜ್ಜಾದ ಗ್ರಾಮಾಡಳಿತ
ಕೆಲೂರ: ಇಲಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿವತಿಯಿಂದ ಎಮ.ಪಿ.ಎಸ್.ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.
ಕಡ್ಡಾಯವಾಗಿ ಮಕ್ಕಳ ಜನನ ನೊಂದಣಿ ಮಾಡುವ ಬಗ್ಗೆ, ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗಟ್ಟುವುದು,ದೈನಂದಿನ ಶಾಲಾ ಆಡಳಿತದಲ್ಲಿ ಎಸ್.ಡಿ.ಎಮ್.ಸಿ. ಗಳ ಸಕ್ರಿಯ ಪಾತ್ರ ಹಾಗೂ ಶಿಕ್ಷಕರ ಕೊರತೆ ಕುರಿತು,ಶಾಲೆ/ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನಿಯಮಿತವಾಗಿ ಶಾಲೆಗೆ ಹಾಜರಾಗದ ಮಕ್ಕಳ ಬಗ್ಗೆ,
ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಹೀಗೆ ಹತ್ತು ಹಲವು ವಿಷಯಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಲು ಈ ಮಕ್ಕಳ ಗ್ರಾಮ ಸಭೆ ಉತ್ತಮವಾದ ವೇದಿಕೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಪಿ.ಬಿ.ಮುಳ್ಳೂರ ಪ್ರಾಸ್ಥಾವಿಕ ನುಡಿಗಳಲ್ಲಿ ತಿಳಸಿದರು.
ಬಳಿಕ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡ ಮಕ್ಕಳು, ತಮ್ಮ ಶಾಲೆಗಳಿಗೆ ಮೂಲಸೌಕರ್ಯ ಮತ್ತು ಸಿಬ್ಬಂದಿ ಅಗತ್ಯತೆಗಳು, ಶುದ್ಧ ಕುಡಿಯುವ ನೀರಿನ ಅಗತ್ಯತೆ, ಮತ್ತು ಇತರೆ ಸಮಸ್ಯೆಗಳ ಕುರಿತು ಚರ್ಚಿಸಿದರು.
ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುತ್ತ ಶೌಚಾಲಯ ವ್ಯವಸ್ಥೆ,ಕುಡಿಯುವ ನೀರಿನ ಸಮಸ್ಯೆ,ಶಾಲಾ ಸ್ವಚ್ಚತೆ ಹಾಗೂ ಉತ್ತಮ ಪರಿಸರ ನಿರ್ಮಾಣದ ಕಾಮಗಾರಿಗಳಿಗೆ ಶೀಘ್ರದಲ್ಲೆ ಚಾಲನೆ ನೀಡಲಿದ್ದು ಗ್ರಾಮದಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ಗ್ರಾಮಾಡಳಿತದ ಪರವಾಗಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.ಈ ವೇಳೆ ಉಪಸ್ಥಿತರಿದ್ದ ಗ್ರಾಮ ಪಂಚಾಯತ ಸದಸ್ಯರು ಮಕ್ಕಳು ನೀರ್ಭಿತರಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ ಎಂದು ಮಕ್ಕಳಿಗೆ ದೈರ್ಯತುಂಬಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಭೀಮವ್ವ ತೋಟಗೇರ ಹನಮಂತ ವಡ್ಡರ,ಉಮೇಶ ಹೂಗಾರ,ಬಾಬು ಸಿಮಿಕೇರಿ,ಬಸವರಾಜ ಮಾದರ,ಸಿ.ಆರ್.ಪಿ ಅಲೂರ ಸರ್,ಸಿ.ಆರ್.ಸಿ ಹಣಗಿ ಸರ್, ಪೋಲಿಸ್ ಇಲಾಖೆ,ಆರೋಗ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕಾರ್ಮಿಕ ಇಲಾಖೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು,ಪ್ರಾಥಮಿಕ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.ಸಣಕಲ್ಲ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.