ಆಸ್ತಿಗಾಗಿ ಅಣ್ಣನ್ನನ್ನೇ ಕೊಲೆ ಮಾಡಿದ ಸಹೋದರರು
ಹೊನ್ನಾವರ: ಹೊನ್ನಾವರ ತಾಲೂಕಿನ ಅರೇಅಂಗಡಿ – ನಿಲ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಅಣ್ಣನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತೆರಳಿದೆ. ಮಾತಿಗೆ ಮಾತು ಬೆಳೆದು ಕೈ ಕೈಮಿಲಾಯಿಸಿಕೊಂಡು ವಿನಾಯಕ ನಾಯ್ಕ ಮತ್ತು ಚಿದಾನಂದ ನಾಯ್ಕ ಎನ್ನುವವರು ಅಣ್ಣನಾದ ಹನುಂಮತ ನಾಯ್ಕ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಸ್ತಿಗಾಗಿ ನಡೆದ ಈ ಹತ್ಯೆ ಹೊನ್ನಾವರ ತಾಲೂಕಿನ ಜನರನ್ನೇ ಬೆಚ್ಚಿ ಬಿಳಿಸಿದೆ.
ತಲೆ ಭಾಗಕ್ಕೆ ಗಂಭೀರವಾಗಿ ಗಾಯವಾದ ಪರಿಣಾಮ ಹನುಮಂತ ಹೊನ್ನಪ್ಪ ನಾಯ್ಕ್(54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೃತರ ಸೋದರ ಮಾವ ಮಾರುತಿ ನಾಯ್ಕ್ (70)ಗೆ ಗಂಭೀರ ಗಾಯಗೊಂಡಿದ್ದಾರೆ.
ಸಾವಿತ್ರಿ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಹೊನ್ನಾವರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಮಹಾಂತೇಶ್ ಪ್ರಕರಣ ದಾಖಲಿಸಿ ಹಲ್ಲೆ ಮಾಡಿ ಕೊಲೆಗೆ ಕಾರಣರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಮತ್ತು ಇತರರ ಪತ್ತೆಗೆ ಸಿ.ಪಿಐ ಶ್ರೀಧರ ಅವರ ಮಾರ್ಗದರ್ಶನದಲ್ಲಿ ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಹೊನ್ನಾವರ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ತೀವ್ರ ಶೋದ ನಡೆಸುತ್ತಿದ್ದಾರೆ.