ಕನ್ನಡ ಸಾಹಿತ್ಯ ಪ್ರಕಾರಗಳು ಗ್ರಾಮೀಣ ಬದುಕಿನ ಬೆಳಕು ಚೆಲ್ಲುತ್ತವೆ
ನಾಗಮಂಗಲ. ನ:- 18 ಕನ್ನಡ ಸಾಹಿತ್ಯ ಸಮಕಾಲೀನ ಪ್ರಕರಗಳು ಪ್ರಾಚೀನ ಮತ್ತು ನವ್ಯ ಸಾಹಿತ್ಯದ ಇಂದು ನಮಗೆ ಗ್ರಾಮೀಣ ಬದುಕಿನ ಹೂ ರಣಗಳನ್ನು ತೆರೆದ ಪುಸ್ತಕದಂತೆ ಸಾಹಿತ್ಯ ನೀಡುತ್ತವೆ ಎಂದು ಪ್ರಾಧ್ಯಾಪಕರಾದ ಡಾ ಸಿ ಎಚ್ ಯತೀಶ್ವರ್ ತಿಳಿಸಿದರು
ಅವರಿಂದು ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ವಿಜ್ಞಾನ ವಿಭಾಗದ ಕಾಲೇಜಿನಲ್ಲಿ ಕನ್ನಡ ವಿಭಾಗ ಗ್ರಂಥಾಲಯ ಮತ್ತು ಮೀನಾಕ್ಷಿ ಗಿರಿರಾಜ್ ಪ್ರತಿಷ್ಠಾನ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಗಿರಿರಾಜ್ ರವರ ಕರುಣಾಕರ ಮತ್ತು ಲಚ್ಚವ್ವ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಸ್ತುತ ಸಾಹಿತ್ಯದ ಭಂಡಾರವು ಅನೇಕ ದಿಗ್ಗಜರುಗಳು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಜ್ಞಾನ ಬಹರವನ್ನು ನೀಡಿದ್ದು ಪ್ರಸ್ತುತ ಸಾಹಿತ್ಯದ ಸಮಕಾಲಿನತೆಯು ಇoದಿನ ಬರಹಗಳು ಗ್ರಾಮೀಣ ಬದುಕಿನ ಹಾಸುಪಾಸಿನ ತೋರಣಗಳನ್ನು ತೆರೆದಿಡುವಂತಹ ಸಾಹಿತ್ಯದ ಮೌಲ್ಯತೆಯನ್ನು ಯುವ ಜನಾಂಗಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು
ನಾವುಗಳು ಕನಸು ಕಟ್ಟುವ ಕನ್ನಡದ ಭಾಷಾಜ್ಞಾನದ ಹಗಲು ಕನಸು ಕಾಣುವ ನಿಟ್ಟಿನಲ್ಲಿ ಚಿಂತನೆಯ ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ನಮಗೆ ಕನಸು ಕನಸಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ ವೆಂದು ಸಾಹಿತ್ಯದ ಗೌಣದ ಸಾಂದರ್ಭಿಕತೆ ಎಳೆಎಳೆಯಾಗಿ ವಿದ್ಯಾರ್ಥಿಗಳಿಗೆ ಅನಂತರಾಜು ಅರಸು ತಿಳಿಸಿದರು.
ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮಾನಂದ ಸ್ವಾಮಿಗಳು ಹಾಗೂ ಗಣ್ಯರು ಕೃತಿ ಬಿಡುಗಡೆ ಮಾಡಿ ಆಶೀರ್ವಚನ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ. ಎಚ್.ಎಸ್ ರವೀಂದ್ರ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಹೊನ್ನ ಶೆಟ್ಟಿ ಗಿರಿರಾಜ್ ದಿನೇಶ್ ಹೆರಗನಹಳ್ಳಿ ಹಾಗೂ ಅನೇಕ ಗಣ್ಯರು, ಕಾಲೇಜು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಡಿ.ಆರ್ ಜಗದೀಶ್ ನಾಗಮಂಗಲ