ಮನೆಯಲ್ಲಿ ಆಟವಾಡುತ್ತಿದ್ದ 2 ವರುಷದ ಮಗುವಿಗೆ ಹಾವು ಕಚ್ಚಿ ಸಾವು
ಶಿರಸಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 2 ವರುಷದ ಮಗು ಹಾವು ಕಚ್ಚಿ ಮೃತಪಟ್ಟ ಘಟನೆ ಬನವಾಸಿ ದಾಸನಕೊಪ್ಪದಲ್ಲಿ
ನಡೆದಿದೆ.
ತರಾನ್ ಮಹಮದ್ ಸಾಬ್ (2) ಮೃತ ಮಗು. ಆಟವಾಡುತ್ತಿದ್ದ ಮಗು ಅಳಲು ಪ್ರಾರಂಭಿಸಿದೆ. ಮೊದಲು ಇರುವೆ ಕಚ್ಚಿರಬಹುದೆಂದು ಪಾಲಕರು ಸುಮ್ಮನಾಗಿದ್ದರು. ಮಗು ಅಳುತ್ತಿತ್ತು ಕಚ್ಚಿದ ಬಗ್ಗೆ ಸನ್ನೆ ಮಾಡುತ್ತಿತ್ತು.
ಕೆಲ ಹೊತ್ತಿನಲ್ಲೆ ಮಗುವಿನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭವಾಗಿದೆ. ತಕ್ಷಣ ಮಗುವನ್ನು ಸಂಶಯದಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಮಗು ಮೃತಪಟ್ಟಿದ್ದು ಈ ವೇಳೆ ವೈದ್ಯರು ಪರೀಕ್ಷಿಸಿ ಮಗುವಿಗೆ ಹಾವು ಕಚ್ವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.