ಯಲ್ಲಾಪುರದಲ್ಲಿ ಬಿಜೆಪಿಗೆ ತೊರೆದು
ಕಾಂಗ್ರೆಸ್ ಸೇರಿದ ಶ್ರೀನಿವಾಸ ಭಟ್ಟ ಧಾತ್ರಿ
ಯಲ್ಲಾಪುರ -ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ರಾಜಕೀಯವಾಗಿ ಭಾರಿ ಬದಲಾವಣೆ ನಡೆಯುತ್ತಿದ್ದು, ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಬಿಜೆಪಿ ಮುಖಂಡ, ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಹಸಂಚಾಲಕ ಶ್ರೀನಿವಾಸ ಭಟ್ಟ ಧಾತ್ರಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇದು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಅವರು ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ಸೇರುವ ಸುಳಿವು ನೀಡಿದ್ದಾರೆ.
ಶ್ರೀನಿವಾಸ ಭಟ್ಟ ಧಾತ್ರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ತಮ್ಮ ಜನಪರ ಕಾಳಜಿ ಮತ್ತು ಕೆಲಸಗಳಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಚುನಾವಣಾ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದರು. ಈಗ ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಸಚಿವ ಶಿವರಾಮ ಹೆಬ್ಬಾರೊಂದಿಗಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿದ್ದಾರೆ.
ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದಿದ್ದು, ಡಿಸೆಂಬರ್ 15 ರಂದು ಕಾಂಗ್ರೆಸ್ ಸೇರಲಿದ್ದಾರೆ.
ಇದೀಗ ಯಲ್ಲಾಪುರ ಬಿಜೆಪಿ ಯುವ ಧುರೀಣ ಎನಿಸಿದ್ದ ಶ್ರೀನಿವಾಸ ಧಾತ್ರಿ ಸಹ ಕಾಂಗ್ರೆಸ್ ಸೇರುವ ಮೂಲಕ ಹೆಬ್ಬಾರ್ ಗೆ ನೇರ ಸವಾಲೆಸೆಯುವ ಸಾಧ್ಯತೆ ಕಂಡುಬರುತ್ತಿದೆ.