ಬೆಳಗಾಂವ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರವಾಗಿ ನಿರ್ಣಯಿಸಲು ಸರಕಾರಕ್ಕೆ ರವೀಂದ್ರ ನಾಯ್ಕ ಅಗ್ರಹ.
ಯಲ್ಲಾಪುರ: ಮುಂಬರುವ ಬೆಳಗಾವಿಯಲ್ಲಿ ಜರುಗುವ ಚಳಿಗಾಲದ ಅಧಿವೇಶನದಲ್ಲಿ, ಅರಣ್ಯವಾಸಿಗಳ ಪರ ನಿರ್ಣಯಿಸಿ, ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಕುರಿತು ಅಂತಿಮ ವಿಚಾರಣೆ ಇರುವ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಯಲ್ಲಾಪುರ ತಾಲೂಕಿನ, ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ಜರುಗಿದ, ಶಿರಸಿಯಲ್ಲಿ ಡಿ. ೧೭ ರಂದು ಜರಗುವ ಅರಣ್ಯವಾಸಿಗಳನ್ನ ಉಳಿಸಿ ಪೂರ್ವಭಾವಿ ಸಭೆಯನ್ನ ಉದ್ದೇಶಿಸಿ ಮಾತನಾಡುತ್ತಿದ್ದರು.
ಸುಫ್ರೀಂ ಕೋರ್ಟನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಭೂಮಿ ಹಕ್ಕಿನ ಕುರಿತು ಪರ್ಯಾಯ ಪರಿಹಾರ ನೀಡುವಲ್ಲಿ ಇಂದಿಗೂ ಚಿಂತಿಸದೇ ಇರುವ ಕುರಿತು ಅವರು ವಿಷಾದ ವ್ಯಕ್ತಪಡಿಸಿದರು.
ತಾಲೂಕ ಅಧ್ಯಕ್ಷ ಭಿಮ್ಸಿ ವಾಲ್ಕೀಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಸಿತಾರಾಮ ನಾಯ್ಕ ಕುಂದರಗಿ ಸ್ವಾಗತವನ್ನ ಮಾಡಿದರು, ದಿವಾಕರ ಮರಾಠಿ ಆನಗೋಡ, ವಿಠ್ಠಲ ಮಹಾಲೆ ದೇಹಳ್ಳಿ, ಜಗದೀಶ್ ಕುಣಬಿ, ಸಂತೋಷ ನಾಯ್ಕ ಮಳಲಗಾಂವ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ರಾಘುವೇಂದ್ರ ಕುಣಬಿ ಮಲವಳ್ಳಿ, ಟಿಸಿ ಗಾಂವಕರ ಮಲವಳ್ಳಿ, ಭಾಸ್ಕರ ಗೌಡ ಹಿತ್ಲಳ್ಳಿ, ಮಾಬು ಕೋಕರೆ ಕಣ್ಣಿಗೇರಿ, ಸೀತಾರಾಮ ನಾಯ್ಕ ಕುಂದರಗಿ, ಸುರೇಸ್ ನಾಯ್ಕ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.
೬೯,೭೭೩ ಅರ್ಜಿ ತೀರಸ್ಕಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ನೀಡಿದ ಅರ್ಜಿಗಳಲ್ಲಿ ಜಿಲ್ಲಾದ್ಯಂತ ೬೯,೭೭೩ ಅರ್ಜಿಗಳು ಪ್ರಥಮ ಹಂತದಲ್ಲಿ ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಮಂಜೂರಿಗೆ ಸಂಬAಧಿಸಿ ಪುನರ್ ಪರಿಶೀಲಿಸುವ ಸಂದರ್ಭದಲ್ಲಿ ಸೂಕ್ತ ಸಾಂದರ್ಭಿಕ ದಾಖಲೆ ನೀಡುವ ಕಾರ್ಯ ಜರುಗಬೇಕೆಂದು ರವೀಂದ್ರ ನಾಯ್ಕ ಹೇಳಿದರು.