ಪ್ರೌಢಶಾಲಾ ಶಿಕ್ಷಕನಿಂದ ವರದಕ್ಷಿಣೆ ಕಿರುಕುಳ -ಪತ್ನಿ ನೇಣಿಗೆ ಶರಣು
ಅಂಕೋಲಾ -ಗೃಹಿಣಿಯೊಬ್ಬಳು ಮನೆಯ ಕೊಠಡಿಯ ಪಕಾಸಿಗೆ
ವೇಲನಿಂದ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಸೆ ಗ್ರಾಪಂ. ವ್ಯಾಪ್ತಿಯ ಹಂದಿಗದ್ದೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು, ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಯಮುನಾ ವಿಘ್ನೇಶ್ವರ ಗೌಡ (30) ಆತ್ಮಹತ್ಯೆ ಮಾಡಿಕೊಂಡ ಗೃಹಣಿ.
ಮೃತಳ ಪತಿ (ಸುಂಕಸಾಳ ಪ್ರೌಢ ಶಾಲೆಯ ಶಿಕ್ಷಕ) ವಿಘ್ನೇಶ್ವರ
ಬುದವಂತ ಗೌಡ, ಮೈದುನ ಪತ್ನಿ ಶ್ಯಾಮಲಾ ರವಿ ಗೌಡ, ಮೈದ ರವಿ
ಬುದವಂತ ಗೌಡ ಹಾಗೂ ಅತ್ತೆ ಸಾವಿತ್ರಿ ಬುದವಂತ ಗೌಡ ಇವರ ಮೇಲೆ ಪ್ರಕರಣ ದಾಖಲಾಗಿದೆ. ಸಾವಿತ್ರಿ ಗೌಡ ಹೊರತು ಪಡಿಸಿ ಎಲ್ಲರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಘಟನೆ ಕುರಿತು ತಾಲೂಕಿನ ಮಾದನಗೇರಿ ಬಳಲೆಯ ಮೃತಳ
ಸಹೋದರ ಗುರು ಹಮ್ಮು ಗೌಡ ತನ್ನ ಸಹೋದರಿ ಸಾವಿಗೆ ನಾಲ್ವರು ಕಾರಣ ಎಂದು ಪೊಲೀಸ ದೂರಿನಲ್ಲಿ ತಿಳಿಸಿದ್ದಾನೆ. ಮದುವೆ ಆಗಿ 7 ತಿಂಗಳ ಆಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಉದಯ ಕುಂಬಾರ ನೇತೃತ್ವದಲ್ಲಿ ಪೊಲೀಸರು ಪಂಚನಾಮೆ ನಡೆಸಿದರು.
ಪಿಎಸ್ಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‍ಐ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡು
ಮೂವರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.