ಶ್ರೀ ವಾಸುಕಿ ಸರ್ಪ ದೇವಸ್ಥಾನ ಸರ್ಪನಕಟ್ಟೆ ಗುರುವಂದನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ- ನಾಮಧಾರಿ ಸಮಾಜದ ಅಧ್ಯಕ್ಷರಿಂದ
ಪತ್ರಿಕಾ ಪ್ರಕಟಣೆ
ಭಟ್ಕಳ:- ಶ್ರೀ ವಾಸುಕಿ ಸರ್ಪ ದೇವಸ್ಥಾನ ಸರ್ಪನಕಟ್ಟೆ ಗುರುವಂದನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣದ ದೇವಸ್ಥಾನ ಆಸರಕೇರಿಯ ಆಡಳಿತ ಮಂಡಳಿ ಪರವಾಗಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಅಧ್ಯಕ್ಷ ಕ್ರಷ್ಣಾ ನಾಯ್ಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸುಮಾರು 25 ವರ್ಷದಿಂದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಪತಿಗಳಾದಂತಹ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಜೀಯವರನ್ನು ಉತ್ತರಕನ್ನಡ ಜಿಲ್ಲೆಯ ನಾಮಧಾರಿ ಸಮಾಜದ ಕುಲಗುರುಗಳು ಅಂತಾ ಒಪ್ಪಿ ಸ್ವೀಕಾರ ಮಾಡಿದ್ದು ಇರುತ್ತದೆ. 2007 ನೇ ಇಸವಿಯಲ್ಲಿ ಕುಮಟಾದ ಮಣಕಿ ಮೈದಾನದಲ್ಲಿ ಸಮಸ್ತ ಉತರಕನ್ನಡ ಜಿಲ್ಲೆಯ ನಾಮಧಾರಿ ಸಮಾಜದವರು ಗುರುವಂದನಾ ಕಾರ್ಯಕ್ರಮ ನಡೆಸಿ ಅಧೀಕೃತವಾಗಿ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ನಮ್ಮ ಕುಲಗುರುಗಳು ಎಂದು ಸ್ವೀಕಾರ ಮಾಡಿ ಘೋಷಣೆ ಮಾಡಲಾಗಿರುತ್ತದೆ.
ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಶಿಷ್ಯರೆಂದು ಸ್ವೀಕಾರ ಮಾಡಿದ್ದು, ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ದೈವಾದೀನರಾದ ನಂತರ ಅವರ ಶಿಷ್ಯರಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿಗಳಾಗಿರುತ್ತಾರೆ. ಹಾಗಾಗಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿವರೇ ನಮ್ಮ ಸಮಾಜದ ಕುಲಗುರುಗಳಾಗಿರುತ್ತಾರೆ. ಹಾಗಾಗಿ ಉತ್ತರಕನ್ನಡ ಜಿಲ್ಲೆ ನಾಮಧಾರಿ ಸಮಾಜದವರಲ್ಲಿ ಯಾವುದೇ ರೀತಿಯ ಗೊಂದಲವಿರುವುದಿಲ್ಲ. ನಾಮಧಾರಿ ಸಮಾಜದ ಕುಲಗುರುಗಳು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರೇ ಆಗಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ , ಬ್ಯಾನರುಗಳಲ್ಲಿ, ಆಮಂತ್ರಣ ಪತ್ರಿಕೆಯಲ್ಲಿ ಬರೆಯಲ್ಪಡುವ ಗೊಂದಲಮಯವಾದ ಹೇಳಿಕೆಗಳಿಗೆ ನಮ್ಮ ನಾಮಧಾರಿ ಸಮಾಜ ಬಾಂಧವರು
ಕಿವಿಗೊಡಬಾರದು.
ಶ್ರೀ ವಾಸುಕಿ ಸರ್ಪ ದೇವಸ್ಥಾನ ಸರ್ಪನಕಟ್ಟೆ ಇವರು ದಿನಾಂಕ 18/12/2022 ರಂದು ನಡೆಸುವ ಗುರುವಂದನಾ ಕಾರ್ಯಕ್ರಮ ಆಂಮತ್ರಣ ಪತ್ರಿಕೆಯಲ್ಲಿ ನಮ್ಮ ನಾಮಧಾರಿ ಸಮಾಜದ ಹೆಸರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಹೆಸರು ಬಳಸಿರುವುದು ಅಕ್ಷಮ್ಯ ಅಪರಾಧ, ಹಾಗಾಗಿ ಅವರು ನಡೆಸುವ ಗುರುವಂದನಾ ಕಾರ್ಯಕ್ರಮಕ್ಕೆ ಸಂಭAದಪಟ್ಟAತೆ ನಮ್ಮ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣದ ದೇವಸ್ಥಾನ ಆಸರಕೇರಿಯಲ್ಲಿ ಆಡಳಿತ ಮಂಡಳಿ ಪರವಾಗಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಈ ಕಾರ್ಯಕ್ರಮದಲ್ಲಿ ನಮ್ಮ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸುವುದಿಲ್ಲ. ಕಾರಣ ನಮ್ಮ ನಾಮಧಾರಿ ಸಮಾಜ ಭಾಂದವರು ಗೊಂದಲ ಪಡುವ ಅವಶ್ಯವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ನಾಮಧಾರಿ ಅಭಿವೃದ್ದಿ ಸಂಘ, ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಗುರುಮಠ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಾ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುರುಮಠದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಗುರುಮಠದ ಕಾರ್ಯದರ್ಶಿ ಮಾಸ್ತಿ ನಾಯ್ಕ, ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು.