ಭಟ್ಕಳದ ಮುಂಡಳ್ಳಿ ಯುವಕ ಈಶ್ವರ್ ಮೊಗೇರ ಗೆ ಹೆಜ್ಜೇನು ದಾಳಿ- ಆಸ್ಪತ್ರೆಗೆ ದಾಖಲು
ಭಟ್ಕಳ -ಮುಂಡಳ್ಳಿ ಹೆಜ್ಜೇನು ದಾಳಿಯಿಂದ ಯುವಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲುಗೊಂಡ ಘಟನೆ ಡಿ. 6 ರಂದು ಮಂಗಳವಾರ ಮಧ್ಯಾಹ್ನ ನಡೆದಿದೆ.
ಹೆಜ್ಜೇನು ದಾಳಿಗೊಳಗಾದ ಯುವಕ
ಅಂಬಾರಿಹಿತ್ತಲು ಮುಂಡಳ್ಳಿಯ
ಈಶ್ವರ ಮಂಜಯ್ಯ ಮೊಗೇರ. ಅಂಗವಿಕಲನಾಗಿದ್ದ ಇವರು ತನ್ನ ದಿನನಿತ್ಯ ಕೆಲಸ ದೊಣ್ಣಿಗೆ ಹೋಗುವಾಗ ಸುರಭಿ ಜನರಲ್ ಶಾಪ್ ( ಅಂಗಡಿ ) ಎದುರು ಒಮ್ಮೆಗೆ ಹೆಜ್ಜೇನಿನ ಗುಂಪು ದಾಳಿ ಮಾಡಿದೆ.
ಅಂಗವಿಕಲನಾಗಿದ್ದರಿಂದ ದಾಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಗಂಭೀರ ಗಾಯ ಗೊಂಡಿರುತ್ತಾರೆ. ಕೂಡಲೇ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಮೇರಿಗೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆ ದಾಖಲು ಮಾಡಲಾಯಿತು.
ಈಶ್ವರ ಮಂಜಯ್ಯ ಮೊಗೇರ
ತುಂಬಾ ಬಡತನದಲ್ಲಿರುವುದರಿಂದ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದಾದ ಸ್ವಲ್ಪ ಸಮಯದಲ್ಲೇ
ಮತ್ತೆ ಅದೇ ಹೆಜ್ಜೇನು ಐದಾರು ಜನರಿಗೆ ದಾಳಿ ಮಾಡಿರುತ್ತದೆ.
ಇದರಲ್ಲಿ ಮೂವರು ಮಹಿಳೆಯರು ಇಬ್ಬರು ಪುರುಷರು ಆಗಿರುತ್ತಾರೆ.
ಈ ಹೆಜ್ಜೇನು ಗುಂಪನ್ನು ಇಲ್ಲಿಂದ ಓಡಿಸುವ ಕೆಲಸವನ್ನು ಸಂಬಂಧ ಪಟ್ಟ ಅರಣ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರ ಒತ್ತಾಯವಾಗಿದೆ.