ಡಿ. ೧೭ ಶಿರಸಿ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಗೆ ಮನೆಗೊಬ್ಬರಂತೆ ಬರಲು ರವೀಂದ್ರ ನಾಯ್ಕ ಕರೆ.
ಕುಮಟ: ಅರಣ್ಯವಾಸಿಗಳ ಹಿತ ಕಾಪಾಡುವ ದಿಶೆಯಲ್ಲಿ, ಶಿರಸಿಯಲ್ಲಿ ಡಿ. ೧೭ ರಂದು ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಗೆ ಮನೆಗೊಬ್ಬರಂತೆ ಅರಣ್ಯ ಅತಿಕ್ರಮಣದಾರರು ಆಗಮಿಸಿ ಅರಣ್ಯ ಅತಿಕ್ರಮಣದಾರರ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಕುಮಟ ತಾಲೂಕಿನ ಕತಗಾಲದಲ್ಲಿ ಡಿ. ೧೭ ರಂದು ಶಿರಸಿಯಲ್ಲಿ ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಿರ್ದಿಷ್ಟ ಕಾಲಮಾನದಂಡದಡಿಯಲ್ಲಿ ಅರಣ್ಯ ಹಕ್ಕು ಅನುಷ್ಟಾನದ ಪ್ರಕ್ರಿಯೇ ಜರುಗಿಸಲು ಸರಕಾರವು ವಿಫಲವಾಗಿದೆ. ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ಅತಿಕ್ರಮಣದಾರರು ಬದ್ಧರಾಗಿರಬೇಕು. ಕಾನೂನಾತ್ಮಕ ಸಮಸ್ಯೆಗಳನ್ನ ಬಗೆಹರಿಸುವುದೊಂದಿಗೆ ಅರಣ್ಯ ಹಕ್ಕು ನೀಡುವಲ್ಲಿ ಸರಕಾರ ಬದ್ಧತೆಯನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ವಹಿಸಿದ್ದರು. ಸ್ವಾಗತ ಮತ್ತು ವಂದನಾರ್ಪಣೆಯನ್ನ ಮಹೇಂದ್ರ ನಾಯ್ಕ ಕತಗಾಲ ಅವರು ಮಾಡಿದರು. ಸಭೆಯಲ್ಲಿ ಕೃಷ್ಣಾನಂದ ವೆರ್ಣೆಕರ್, ರಾಜು ಗೌಡ, ಸೀತಾರಾಮ ನಾಯ್ಕ, ಜಗದೀಶ್ ನಾಯ್ಕ ಹೆಬೈಲ್, ಸಾಲಮಾಂ ಫರ್ನಾಂಡಿಸ್, ಮಾಲತಿ ಹೆಗಡೆ, ರಾಘು ಅಂಬಿಗ, ನಾಗರಾಜ ನಾಯ್ಕ